ಭಾಷಾಶಕ್ತಿ ( Language Power )

 

1. ಭಾಷಾಶಕ್ತಿ ( Language Power )

 ' ಭಾಷಾಶಕ್ತಿ' ಎಂಬುದನ್ನು ಒಬ್ಬ ವ್ಯಕ್ತಿಯ ಭಾಷಾ ಪ್ರಭುತ್ವ ಹಾಗೂ ಭಾಷಾ ಸಾಮರ್ಥ್ಯದ ಮೇಲೆ ಪರಿಗಣಿಸಲಾಗುತ್ತದೆ. ಭಾಷಾ ಪ್ರಭುತ್ವ ಹಾಗೂ ಭಾಷಾ ಸಾಮರ್ಥ್ಯಗಳಲ್ಲಿ ಕಿಂಚಿತ್ ವ್ಯತ್ಯಾಸ ಕಾಣಬಹುದು. ಭಾಷಾ ಪ್ರಭುತ್ವವೆಂದರೆ (Lane guage Mastry) ಒಬ್ಬ ವ್ಯಕ್ತಿ ಒಂದು ಭಾಷೆಯಲ್ಲಿ ಗಳಿಸಿರುವ ಸ್ವಾಮ್ಯತೆ, ಸಾಮರ್ಥ್ಯ ( Language ability ) ಎಂದರೆ ಭಾಷೆಯನ್ನು ಸಂರ್ಭೋಚಿತವಾಗಿ ಬಳಸುವ ಹಾಗೂ ಇತರರ ಅನಿಸಿಕೆಗಳನ್ನು ಗ್ರಹಿಸಿ ಪ್ರತಿಕ್ರಿಯಿಸುವ ಸಾಮರ್ಥ್ಯ ಯಾವ ವ್ಯಕ್ತಿಯಲ್ಲಿ ಎರಡೂ ಅಂಶಗಳು ಕರಗತವಾಗಿರುತ್ತವೆಯೋ ಅದು ಅವನ ಭಾಷಾ ಶಕ್ತಿ (Language Power) ಎಂದು ಹೇಳಲಾಗುತ್ತದೆ. ಇಲ್ಲಿ ವ್ಯಕ್ತಿಯ ಮಾತೃ ಭಾಷೆಯಲ್ಲದ ಇನ್ನೊಂದು (ದ್ವಿತೀಯ) ಭಾಷೆಯಲ್ಲಿ ಎನ್ನುವುದು ಗಮನಿಸಬೇಕಾದ ಅಂಶ.

ಭಾಷಾಶಕ್ತಿ ಹೊಂದಿರುವ ವ್ಯಕ್ತಿಯು ತನ್ನ ನಿತ್ಯ ಜೀವನದಲ್ಲಿ ಸಾಮಾಜಿಕ ಸಂದರ್ಭಗಳಲ್ಲಿ ಒಂದು ಭಾಷೆಯಲ್ಲಿ ಸಮರ್ಥವಾಗಿ, ಪರಿಣಾಮಕಾರಿಯಾಗಿ ಸಂವಹನ ಮಾಡಲು ಶಕ್ತನಾಗಿರುತ್ತಾನೆ. ಹೀಗಿದ್ದಲ್ಲಿ ಇದು ಅವನಿಗೆ ಬಳಸುವ ಭಾಷೆಯಲ್ಲಿರುವ ಭಾಷಾ ಶಕ್ತಿ.

ವಕ್ರ ಮತ್ತು ಶೋತೃ ಸಂಬಂಧಿತ ಆಧಾರದ ಮೇಲೆ ಭಾಷಾ ಶಕ್ತಿ ಎನ್ನುವುದು ಎರಡು ಅಂಶಗಳನ್ನು ಒಳಗೊಂಡಿರುತ್ತದೆ.

1) ವಕ್ರವಾಗಿ ಒಬ್ಬ ವ್ಯಕ್ತಿಯು ಪರಿಣಾಮಕಾರಿಯಾಗಿ ಮಾತನಾಡುವ ಸಾಮರ್ಥ್ಯ ಮತ್ತು ಜೊತೆಯಲ್ಲಿಯೇ ತಾನು ಮಾತನಾಡಿದ ವಿಷಯವು ತನ್ನ ಪ್ರೋತೃವಿಗೆ ಅರ್ಥ ಮಾಡಿಸುವ ಸಾಮರ್ಥ್ಯ: ಇಲ್ಲಿ ವ್ಯಕ್ತಿಯು ಉತ್ತಮ ಭಾಷಾ ಶೈಲಿಯೊಂದಿಗೆ ಮಾತನಾಡಿ ಅದು ತನ್ನ ಪ್ರೋತೃವಿಗೆ ಅರ್ಥ ಮಾಡಿಸದಿದ್ದಲ್ಲಿ ಅಥವಾ ಕೇಳುಗನಿಗೆ ಅರ್ಥವಾಗಿರದಿದ್ದಲ್ಲಿ ಅದು ಅವನ ಭಾಷಾ ಶಕ್ತಿಯಲ್ಲ : ಭಾಷೆ ಸರಳವಾಗಿದ್ದು , ಔಚಿತ್ಯ ಪೂರ್ಣ ವಾಗಿದ್ದು , ಸಂದರ್ಭೋಚಿತವಾಗಿದ್ದು ಕೇಳುಗನಿಗೆ ಅರ್ಥಪೂರ್ಣವಾಗಿ ಸಂಪೂರ್ಣವಾಗಿ ಅರ್ಥವಾಗಿದ್ದಲ್ಲಿ ಮಾತ್ರ ಅದು ಮಾತನಾಡಿದ ವ್ಯಕ್ತಿಯ ಭಾಷಾ ಶಕ್ತಿಯಾಗಿರುತ್ತದೆ.

2) ಮಾತನಾಡುವ ಸಾಮರ್ಥ್ಯದ ಜೊತೆಯಲ್ಲಿ ಶೋತೃವಾಗಿ ವ್ಯಕ್ತಿಯ ಸೂಕ್ತವಾಗಿ , ಅವಧಾನ ಪೂರ್ವಕವಾಗಿ ಆಲಿಸಿ ವಿಷಯದ ಅರ್ಥಗ್ರಹಿಸುವ ಸಾಮರ್ಥ್ಯ : ಸಾಮರ್ಥ್ಯವೂ ಅವನ ಭಾಷಾ ಶಕ್ತಿಯಾಗಿರುತ್ತದೆ. ಒಬ್ಬ ವ್ಯಕ್ತಿಯಲ್ಲಿ ಕೇವಲ ಸರಳ, ಸುಂದರವಾಗಿ ಮಾತನಾಡುವ ಸಾಮರ್ಥ್ಯವಿದ್ದರೆ ಸಾಲದು ಅದೇ ವ್ಯಕ್ತಿ ಉತ್ತಮ ಪ್ರೋತೃವಾಗಿರಬೇಕಾಗುತ್ತದೆ.

ಭಾಷಾಶಕ್ತಿ ಹೊಂದಿರುವ ವ್ಯಕ್ತಿಯ ಲಕ್ಷಣಗಳು :

) ಭಾಷಾ ಶಕ್ತಿ ಹೊಂದಿರುವ ವ್ಯಕ್ತಿಯು ಎಲ್ಲ ರೀತಿಯ ಸಾಮಾಜಿಕ ಸಂದರ್ಭ ಗಳಲ್ಲಿಯೂ, ಎಲ್ಲ ರೀತಿಯ ವ್ಯಕ್ತಿಗಳೊಂದಿಗೂ ಉತ್ತಮವಾಗಿ ಸಂವಹನ ಮಾಡುವ ಸಾಮರ್ಥ್ಯ ಹೊಂದಿರುತ್ತಾನೆ. ಸಾಮರ್ಥ್ಯ ಗಳಿಸಿರುತ್ತಾನೆ.

ಬಿ) ಸಮಯ - ಸಂದರ್ಭಗಳಿಗೆ ಅನುಗುಣವಾಗಿ ಉತ್ತಮವಾಗಿ ಮಾತನಾಡುವ

ಸಿ) ಮಾತೃಭಾಷೆಯಲ್ಲದಿದ್ದರೂ ದ್ವಿತೀಯ ಭಾಷೆಯಲ್ಲಿ ಸುಲಲಿತವಾಗಿ ಪ್ರತಿಕ್ರಿಯಿಸಲು ಸಾಮರ್ಥ್ಯಗಳಿಸಿರುತ್ತಾನೆ. ಭಾಷಾಶಕ್ತಿ ಯಾವ ಭಾಷೆಯಲ್ಲಿ ಹೊಂದಿರುತ್ತಾನೆಯೋ, ವ್ಯಕ್ತಿಯಲ್ಲಿ ದ್ವಿತೀಯ ಭಾಷೆ ಪ್ರಥಮ ಭಾಷೆ (ಮಾತೃಭಾಷೆ) ಯಷ್ಟೇ ಪ್ರಬಲವಾಗಿರುತ್ತದೆ.

ಡಿ) ಭಾಷಾಶಕ್ತಿ ಇದ್ದವನ ಇನ್ನೊಂದು ಲಕ್ಷಣವೆಂದರೆ ಈತನಿಗೆ ತನ್ನ ಮಾತೃ ಭಾಷೆಯಲ್ಲಿಯೂ ಸಂಪೂರ್ಣ ಪ್ರಭುತ್ವವಿರುತ್ತದೆ. ಉದಾಹರಣೆಗೆ: ಇಬ್ಬರು ವ್ಯಕ್ತಿಗಳು ತಮ್ಮ ಮಾತೃಭಾಷೆಯಲ್ಲದ ಒಂದು ಭಾಷೆಯಲ್ಲಿ ಮೌಖಿಕ ಸಂವಹನ ಮಾಡುತ್ತಿದ್ದಾಗ, ಅವರು ಮಾತನಾಡುತ್ತಿರುವ ಭಾಷೆ ಮಾತೃಭಾಷೆಯುಳ್ಳವನಿಗೆ ಅವರಿಬ್ಬರು ತಪ್ಪು ತಪ್ಪಾಗಿ ಮಾತನಾಡುತ್ತಿ ದ್ದರೂ ಗ್ರಹಿಸುವ ಶಕ್ತಿಯಿರುತ್ತದೆ . ಅದೂ ಕೂಡ ತನ್ನ ಭಾಷೆಯ ಸ್ವರಭಾರದಲ್ಲಿಯೇ ( Accent ) ಅರ್ಥಮಾಡಿಕೊಳ್ಳುತ್ತಾನೆ . ಭಾರತದಲ್ಲಿ ಇಬ್ಬರು ವ್ಯಕ್ತಿಗಳು ಇಂಗ್ಲೀಷಿನಲ್ಲಿ ತಪ್ಪು ತಪ್ಪಾಗಿ ಮಾತನಾಡಿಕೊಳ್ಳುತ್ತಿ ದ್ದರೆ , ಅಮೆರಿಕಾದವನು ಅದನ್ನು ಕೇಳಿ ಅದನ್ನು ತನ್ನ ಇಂಗ್ಲಿಷಿನ ಜಾಯ ಮಾನಕ್ಕನುಗುಣವಾಗಿ ಸಂಪೂರ್ಣ ಅರ್ಥ ಮಾಡಿಕೊಂಡರೆ ಅದು ಸಾಧ್ಯ ವಾದುದು ಅಮೆರಿಕಾದವನ ಭಾಷಾ ಶಕ್ತಿಯಿಂದ.

) ಒಬ್ಬ ವ್ಯಕ್ತಿ ತನ್ನ ದ್ವಿತೀಯ ಭಾಷೆಯ ಶಬ್ದಗಳನ್ನು ಹೊಸದಾಗಿ ಕೇಳಿಸಿ ಕೊಂಡಾಗ ಅವುಗಳನ್ನು ಗ್ರಹಿಸಿಟ್ಟುಕೊಂಡು ಮುಂದೆ ಸಂದರ್ಭೋಚಿತವಾಗಿ ಅದೇ ಭಾಷೆಯ ಜಾಯಮಾನಕ್ಕನುಗುಣವಾಗಿ ಬಳಸುವ ಶಕ್ತಿ ಪಡೆದಿದ್ದಲ್ಲಿ ಅವನ ಭಾಷೆಯ ಭಾಷಾಶಕ್ತಿ ವೃದ್ಧಿಯಾಗಲು ಇದು ಕಾರಣವಾಗುತ್ತದೆ . ಉದಾಹರಣೆಗೆ : ಮಲೆಯಾಳಂ ನವನು ದ್ವಿತೀಯ ಭಾಷೆಯಾಗಿ ಇಂಗ್ಲೀಷಿನ ಹೊಸ ಶಬ್ದ ಕೇಳಿದಾಗ ಅದನ್ನು ಮುಂದೆ ತಾನು ಮಾತನಾಡುವಾಗ ಸಂದರ್ಭಕ್ಕನುಗುಣವಾಗಿ ಇಂಗ್ಲೀಷಿನ ಜಾಯಮಾನಕ್ಕನುಗುಣವಾಗಿ ಬಳಸಿ ಮಾತನಾಡುತ್ತಾ ಅವನ ಇಂಗ್ಲೀಷಿನ ಭಾಷಾಶಕ್ತಿ ವೃದ್ಧಿಯಾಗುತ್ತದೆ . ಮಲೆಯಾಳಂನಲ್ಲಿ ಮಲೆಯಾಳಂ ಭಾಷೆಯ ಜಾಯಮಾನದ ಸ್ವರಭಾರ (accent) ಕ್ಕನುಗುಣವಾಗಿ ಅ' ಕಾರಕ್ಕೆ 'ಳ ' ಕಾರ ಬಳಸುವುದನ್ನು ಕೇಳು ತೇವೆ. ' School ' ನ್ನು ಅವರೂ ' ಸ್ಕೂಲ್ ' ಎಂಬುದಾಗಿ ಉಚ್ಚರಿಸುತ್ತಾರೆ, ಆದರೆ ಭಾಷಾ ಶಕ್ತಿಯಿರುವ ವ್ಯಕ್ತಿ 'Horrible ' (ಮಲೆಯಾಳಂ ಉಚ್ಚಾರ ದಲ್ಲಿ ಹಾರಿಬಳ್ ' ) ಶಬ್ದ ಕೇಳಿದಾಗ ಮುಂದೆ ತಾನು ಮಾತಾಡುವಾಗ , ಸಂದರ್ಭೋಚಿತವಾಗಿ ' Horrible ' ನ್ನು ಇಂಗ್ಲಿಷಿನ ಸ್ವರ ಭಾರಕ್ಕನುಗುಣ ಪಾಗಿಯೇ ' ಹಾರಿಬಲ್ ' ಎಂದು ಬಳಸಿದರೆ ಅವನ ಈ ಸಾಮರ್ಥ್ಯ ಅವನ ಭಾಷಾ ಶಕ್ತಿ ಬೆಳೆಯುತ್ತ ಹೋಗಲು ಕಾರಣವಾಗುತ್ತದೆ . ಹೀಗೆ ವ್ಯಕ್ತಿಯೊಬ್ಬನು ತನ್ನ ಮಾತೃಭಾಷೆ ಮತ್ತು ದ್ವಿತೀಯ ಭಾಷೆ ಅಥವಾ ಬಹುಭಾಷೆಗಳಲ್ಲಿ ಈ ರೀತಿಯ ಲಕ್ಷಣಗಳನ್ನು ಹೊಂದಿರುತ್ತಾನೆ .

ಭಾಷಾಶಕ್ತಿ ಹೊಂದಿರುವ ವ್ಯಕ್ತಿಯ ಸಾಮರ್ಥ್ಯಗಳು :

1) ಆಯಾ ಭಾಷೆಯ ವ್ಯಾಕರಣ ಜ್ಞಾನ : ಆಯಾ ಭಾಷೆಯಲ್ಲಿ ವ್ಯಾಕರಣದ ಸಮರ್ಪಕ ಬಳಕೆ ; ಮೌಖಿಕ ಪ್ರತಿಪಾದನೆಯ ಜ್ಞಾನ ; ಸೂಕ್ತ ಸ್ವರಭಾರದ ಉಚ್ಚಾರ ಕ್ರಮ .

2 ) ಸಾಮಾಜಿಕ ಭಾಷೇಯ ಸಾಮರ್ಥ್ಯ : ಸಾಮಾಜಿಕ ಸಂದರ್ಭಗಳಲ್ಲಿ ಮತ್ತು ಸಾಂಸ್ಕೃತಿಕ ಸನ್ನಿವೇಶಗಳಲ್ಲಿ ಭಾಷೆಯನ್ನು ವ್ಯಾಕರಣಬದ್ಧವಾಗಿ ಬಳಸುವ ಸಾಮರ್ಥ್ಯ .

3 ) ಸಂವಾದ ಸಾಮರ್ಥ್ಯ : ವೈವಿಧ್ಯಮಯ ಸನ್ನಿವೇಶಗಳಲ್ಲಿ ಸೂಕ್ತವಾಗಿ ಭಾಷೆ ಯನ್ನು ಬಳಸುವ ಸಾಮರ್ಥ್ಯ. ಉದಾಹರಣೆಗೆ : ವಿಚಾರ ಸಂಕಿರಣಗಳು, ಕಾರ್ಯಾಗಾರಗಳು , ಚರ್ಚೆ ಸಂವಾದಗಳು , ಸಮ್ಮೇಳನಗಳು , ಹಾಗೂ ಸಮೂಹ ಮಾಧ್ಯಗಳಲ್ಲಿ ಈ ಎಲ್ಲ ಸಂದರ್ಭಗಳಲ್ಲಿ ಆಯಾ ಸನ್ನಿವೇಶ , ಪ್ರಕಾರಗಳಿಗನುಗುಣವಾಗಿ ಸೂಕ್ತವಾಗಿ , ಪ್ರಬುದ್ಧವಾಗಿ , ತರ್ಕಬದ್ಧವಾಗಿ , ಚಿಂತನಾತ್ಮಕವಾಗಿ ಭಾಷೆಯನ್ನು ಬಳಸುವ ಸಾಮರ್ಥ್ಯ .

4) ಭಾಷಾತಂತ್ರ ಸಾಮರ್ಥ್ಯ : ಔಚಿತ್ಯ ಪೂರ್ಣವಾಗಿ , ಸೂಕ್ತವಾಗಿ ಶಾಬ್ಲಿಕ ಮತ್ತು ಆಶಾಬ್ಲಿಕ ಸಂವಹನಗಳನ್ನು ಮೇಳವಿಸುವ ಸಾಮರ್ಥ್ಯ ಮತ್ತು ಅಶಾಬ್ಲಿಕ ಸಂವಹನವನ್ನು ಸಮಯೋಚಿತವಾಗಿ ಸೂಕ್ತವಾಗಿ ಬಳಸುವ ಸಾಮರ್ಥ್ಯ,

 ಇವುಗಳೆಲ್ಲ ಭಾಷಾಶಕ್ತಿ ಹೊಂದಿರುವವನ ಸಾಮರ್ಥ್ಯಗಳು

ಭಾಷಾ ಬೋಧನೆಯಲ್ಲಿ ಭಾಷಾಶಕ್ತಿ ಬೆಳೆಸುವ ಮತ್ತು ಈ ಮೇಲಿನ ಸಾಮರ್ಥ್ಯ ಗಳನ್ನು ಬೆಳೆಸುವ ಭಾಷಾ ಬೋಧಕರು ಲಕ್ಷ್ಯವಹಿಸುವುದು ಅತ್ಯಗತ್ಯ . ಇದಕ್ಕಾಗಿ ಭಾಷಾ ಶಿಕ್ಷಕರು , ತರಗತಿಗಳಲ್ಲಿ ಭಾಷಾ ರೂಢಿಯ ಚಟುವಟಿಕೆಗಳು , ಭಾಷಾ ಆಟಗಳು , ಕಂಠಪಾಠ , ಪದ ಸಂಪತ್ತಿನ ಬೆಳವಣಿಗೆಯ ಚಟುವಟಿಕೆಗಳನ್ನು ಮಾಡಿಸಬೇಕು .

ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ 8-10 ವರ್ಷ ಶಿಕ್ಷಣ ಪಡೆದರೂ ಭಾಷೆ ಯಲ್ಲಿ ಮಕ್ಕಳಿಗೆ ಸರಿಯಾಗಿ ಮಾತಾಡಲು, ಓದಲು, ಬರೆಯಲು ಬರುವುದಿಲ್ಲ - ಎಂಬುದು ಖೇದದ ಸಂಗತಿ. ಇದಕ್ಕೆ ಕಾರಣಗಳು ಹಲವಾರು. ಹಾಗಾದರೆ ಭಾಷಾಶಕ್ತಿ ಬೆಳೆಸುವಲ್ಲಿ ಭಾಷಾ ಬೋಧನೆಯ ಸಂದರ್ಭಗಳಲ್ಲಿ ಉಂಟಾಗುವ ಅಡೆತಡೆಗಳು ಯಾವವು?

ಭಾಷಾ ಬೋಧನೆಯಲ್ಲಿ ಭಾಷಾಶಕ್ತಿ ಬೆಳೆಸುವಲ್ಲಿನ ಅಡೆತಡೆಗಳು :

1) ಪ್ರಾಯೋಗಿಕವಾಗಿ ಭಾಷೆ ಕಲಿಸುವಲ್ಲಿ ನಿರ್ಲಕ್ಷ್ಯ, ಭಾಷೆಯನ್ನಾಗಲಿ, ವ್ಯಾಕರಣವನ್ನಾಗಲೀ ಸಾಂಪ್ರದಾಯಿಕ ಪದ್ಧತಿಯಲ್ಲಿಯೇ ಕಲಿಸುವುದು.

2) ಭಾಷಾ ಪ್ರಯೋಗ ಸಾಮರ್ಥ್ಯ ಬೆಳೆಸುವಲ್ಲಿ ಸಮಯದ ಕೊರತೆ . ಇದ ರಿಂದಾಗಿ ಪಠ್ಯಪುಸ್ತಕದ ಪಾಠ ಮುಗಿಸುವತ್ತಲೇ ಲಕ್ಷ್ಯಕೊಡಲಾಗುತ್ತದೆ.

3) ಭಾಷೆಯ ರೂಢಿಗೆ ಬೇಕಾದ ಸಂಪನ್ಮೂಲಗಳ ಕೊರತೆ .

4 ) ಭಾಷಾ ಆಟಗಳನ್ನು ಮಾಡಿಸಿ ಭಾಷಾ ಪ್ರಯೋಗ ಸಾಮರ್ಥ್ಯ ಬೆಳೆಸುವಲ್ಲಿ ಬೇಕಾದ ತರಬೇತಿ ಭಾಷಾ ಶಿಕ್ಷಕರಿಗೆ ಸಿಗದಿರುವುದು.ಇದರಿಂದ ಶಿಕ್ಷಕರಲ್ಲಿ ಸೂಕ್ತ ಜ್ಞಾನದ ಕೊರತೆ .

5 ) ಪ್ರತಿಪಾಠದಲ್ಲಿಯೂ ಗಟ್ಟಿ ಓದು ಹಾಗೂ ಮೌನ ಓದು ಮಾಡಿಸದಿರುವುದು , ಕ್ರಮಬದ್ಧವಾದ ಓದಿನ ಚಟುವಟಿಕೆಯತ್ತ ಭಾಷಾ ಶಿಕ್ಷಕರ ನಿರ್ಲಕ್ಷ್ಯ .

6 ) ವಿದ್ಯಾರ್ಥಿಗಳಿಗೆ ಸ್ವರಚಿತಪ್ರಬಂಧ ಬರಹ ಮಾಡಿಸದೇ ಶಿಕ್ಷಕರು ತಾವೇ ಬರೆಸಿಕೊಡುವುದು .

7) ಬೋಧನಾಸೂತ್ರಗಳಿಗನುಗುಣವಾಗಿ ಭಾಷೆ ಹಾಗೂ ವ್ಯಾಕರಣ ಕಲಿಸ ದಿರುವುದು ಉದಾಹರಣೆಗೆ : ಸರಳತೆಯಿಂದ ಕ್ಲಿಷ್ಟತೆಯೆಡೆಗೆ, ಮೂರ್ತದಿಂದ ಅಮೂರ್ತದೆಡೆಗೆ ಇತ್ಯಾದಿ.

8) ಪೂರ್ಣ ವಾಕ್ಯಗಳಿಂದ ಬಿಡಿ ಪದಗಳನ್ನು ಕಲಿಸದಿರುವುದು.

9) ಸಂಭಾಷಣೆ, ಚರ್ಚೆ, ಸಂವಾದ ಮುಂತಾದವುಗಳ ಮೂಲಕ ಮಾತುಗಾರಿಕೆ ಕಲಿಸುವಲ್ಲಿ ನಿರ್ಲಕ್ಷ್ಯ .

10) ಭಾಷೆಯನ್ನು ಮುಕ್ತವಾತಾವರಣದಲ್ಲಿ ಕಲಿಸದಿರುವುದು .

11) ಪುಸ್ತಕದ ಭಾಷಾಭ್ಯಾಸ ಬಿಡಿಸುವಲ್ಲಿಯೇ ಭಾಷಾಶಿಕ್ಷಕರು ಹೆಚ್ಚಿನ ಆಸಕ್ತಿ ತೋರಿಸುವುದು .

12) ಬೋಧನೋಪಕರಣಗಳು, ಬೋಧನಾ ತಂಗಳನ್ನು ಪಾ, ಸಂದರ್ಭಗಳಿಗನುಗುಣವಾಗಿ ಬಳಸದಿರುವುದು .

13) ಮಗುವಿನ ಪೂರ್ವ ಭಾಷಾ ಜ್ಞಾನಕ್ಕನುಗುಣವಾಗಿ ಮುಂದೆ ಭಾಷಾಜ್ಞಾನ ಬೆಳೆಸುವಲ್ಲಿ ಭಾಷಾ ಶಿಕ್ಷಕರು ಲಕ್ಷ ವಹಿಸದಿರುವುದು .

14) ಭಾಷಾ ಕಲಿಕೆ - ವಿಷಯ ಕಲಿಕೆಗಳ ನಡುವೆ ಸಹಸಂಬಂಧ ಕಲ್ಪಿಸಿ ಕಲಿಸದಿ ರುವುದು .

15) ವಿಷಯ ಜ್ಞಾನ - ಭಾಷಾ ಜ್ಞಾನ - ವ್ಯಾಕರಣ - ಜ್ಞಾನವನ್ನು ಒಟ್ಟಿಗೇ ಪ್ರಾಯೋಗಿಕವಾಗಿ ಕಲಿಸುವುದರ ಕುರಿತು ಭಾಷಾ ಶಿಕ್ಷಕರಿಗೆ ಸೂಕ್ತ ತರಬೇತಿ ಕೊರತೆ . ಇದರಿಂದ ಮಕ್ಕಳಿಗೆ ಭಾಷಾ ಕಲಿಕೆ ಸೂಕ್ತವಾಗಿ ಆಗದಿರುವುದು . ಈ ರೀತಿಯ ಅನೇಕ ಅಡೆತಡೆಗಳ ಕಾರಣದಿಂದ ಇಂದು ಔಪಚಾರಿಕ ಶಿಕ್ಷಣ ದಲ್ಲಿ ಮಕ್ಕಳಲ್ಲಿ ಭಾಷಾಶಕ್ತಿ ಬೆಳೆಸುವಲ್ಲಿ ಅಸಮರ್ಥರಾಗುತ್ತಿದ್ದೇವೆ . ಈ ಅಡೆ ತಡೆಗಳನ್ನು ನಿವಾರಿಸಿಕೊಂಡು ಭಾಷಾಶಕ್ತಿ ಮಕ್ಕಳಲ್ಲಿ ಬೆಳೆಸುವಲ್ಲಿ ಲಕ್ಷವಹಿಸುವುದು ಅತೀ ಅವಶ್ಯ .

Comments

Popular posts from this blog

ಭಾಷೆಯ ವಿವಿಧ ಘಟಕಾಂಶಗಳು

UDP Language syllabus in Kannada

ಭಾಷಾ ಅನನ್ಯತೆ ( Language Identity )