ಭಾಷಾ ಅನನ್ಯತೆ ( Language Identity )

 

2. ಭಾಷಾಅನನ್ಯತೆ ( Language Identity ) ಭಾಷೆ ಎನ್ನುವುದು ವ್ಯಕ್ತಿಯ ಅನನ್ಯತೆಗಳಲ್ಲಿ ಒಂದು. ' ಅನ್ಯತೆ ' = ' ಅನನ್ಯತೆ '-'ತಾನು ಅದರಿಂದ ಬೇರೆಯಲ್ಲ ಎಂಬ ಭಾವನೆ ' ಎಂಬರ್ಥ. ಭಾಷೆಯಿಂದಲೇ ತನ್ನನ್ನು ದಾಯಿಕವಾಗಿ, ಸಾಂಸ್ಕೃತಿಕವಾಗಿ , ಭಾವನಾತ್ಮಕವಾಗಿ , ಸಂವೇಗಾತ್ಮಕವಾಗಿ ತನ್ನಲ್ಲಿ ಸಾಮಾಜಿಕ ರೀತಿ-ನೀತಿ ಬಂಧಿಸಿಕೊಂಡಿರುತ್ತದೆ. ತನ್ನ ಭಾಷೆಯಲ್ಲಿರುವ ಸಾಂಸ್ಕೃತಿಕಸತ್ವವನ್ನು ತನ್ನಲ್ಲಿ ಅಳವಡಿಸಿಕೊಳ್ಳುವ ಶಕ್ತಿ ಭಾಷಾಅನನ್ಯತೆ.

ಪ್ರತಿಯೊಂದು ಭಾಷೆಯು ತನ್ನದೇ ಆದ ನಿರ್ಬಂಧಗಳು; ಸಾಂಸ್ಕೃತಿಕ ಮೌಲ್ಯಗಳು; ಸಾಂಪ್ರದಾಯಿಕ ಆಚರಣೆಗಳು; ರೂಢಿ ಆಚಾರ - ವಿಚಾರಗಳು; ಜಾನಪದ ಕಲೆಗಳು, ಸಂಸ್ಕೃತಿಗಳ ಪದ್ಧತಿಗಳು ಮುಂತಾದವು ಗಳನ್ನು ಅಳವಡಿಸಿಕೊಂಡಿರುತ್ತದೆ. ಇವೆಲ್ಲವುಗಳು ಆಯಾ ಭಾಷೆಯ ಜನರಲ್ಲಿ ಭಾಷಾ ಬೆಳವಣಿಗೆಯ ಜೊತೆಜೊತೆಯಲ್ಲಿಯೇ ವ್ಯಕ್ತಿತ್ವದ ಜೊತೆ ಮೇಳವಿಸಿಕೊಳ್ಳುತ್ತ ಸಾಗುತ್ತಿರುತ್ತವೆ. ಇವು ಹಿರಿಯರಿಂದ ಮುಂದಿನ ಪೀಳಿಗೆಗೆ ವರ್ಗಾವಣೆಯಾಗುತ್ತ ಬಂದಿರುತ್ತವೆ. ಮುಂದೆ ವ್ಯಕ್ತಿ ಸಾಮಾಜಿಕ, ಸಾಂಸ್ಕೃತಿಕ ಸನ್ನಿವೇಶಗಳಲ್ಲಿ ತಾನು ಭಾಷಾ ಸಂಸ್ಕೃತಿಯವನು ಎಂಬುದಾಗಿ ಗುರುತಿಸಿಕೊಳ್ಳುತ್ತಾನೆ. ಉದಾಹರಣೆಗೆ: ಧಾರವಾಡ ಕನ್ನಡದವನು ಅಮೆರಿಕಾಕ್ಕೆ ಹೋಗಿ ಅಲ್ಲಿಯ ನಾಗರಿಕತೆ ಪಡೆದು ಅಲ್ಲಿಯೇ ನೆಲೆಸಿದರೂ ತನ್ನ ಮಾತೃಭಾಷೆಯ ಕುರಿತು ಹೇಳುವಾಗ ಅಭಿಮಾನದಿಂದ ತಾನು ಧಾರವಾಡ ಕನ್ನಡದವನು ಎಂದು ಗುರುತಿಸಿಕೊಳ್ಳುತ್ತಾನೆ. ಮೊದಲು ಕನ್ನಡಿಗ ಎಂದು ಅವನು ಗುರುತಿಸಿಕೊಂಡರೂ ಬಳಿಕ ಬಂದು ತಲುಪುವುದು ಧಾರವಾಡ ಕನ್ನಡದವನೆಂಬ ಗುರುತಿಸುವಿಕೆಯತ್ತಲೇ, ಯಾಕೆಂದರೆ ಭಾಷಾ ಸಂಸ್ಕೃತಿ ಅವನನ್ನು ಬೇರೆ ಕನ್ನಡದವನೆಂದು ಗುರುತಿಸಿಕೊಳ್ಳುವಲ್ಲಿ ಭಾವನಾತ್ಮಕವಾಗಿ ಆಸ್ಪದ ನೀಡುವುದಿಲ್ಲ. ಇನ್ನು ಇದು ಪ್ರಾದೇಶಿಕವಾಗಿ ವಿಚಾರ ಮಾಡಿದ್ದಲ್ಲಿ ಧಾರವಾಡ ಕನ್ನಡದವನು ಉತ್ತರ ಕನ್ನಡ ಜಿಲ್ಲೆಗೆ ಬಂದು ನೆಲೆಸಿದಲ್ಲಿ ಅವನು ತನ್ನ ರೊಟ್ಟಿ ಊಟ ಬಿಡಲಾರ. ಹಬ್ಬ ಹರಿದಿನಗಳ ಆಚರಣೆಗಳನ್ನು ತನ್ನದೇ ರೀತಿಯಲ್ಲಿಯೇ ಆಚರಿಸಿ ಉತ್ತರ ಕನ್ನಡದ ಆಚರಣೆಗಳಿಗೆ ಒಗ್ಗಿಕೊಳ್ಳಲಾರ. ಪ್ರತಿ ಸಾಮಾಜಿಕ, ಸಾಂಸ್ಕೃತಿಕ ಸನ್ನಿವೇಶಗಳಲ್ಲಿ ತಾನು ಧಾರವಾಡದ ಸಂಸ್ಕೃತಿಯವನೆಂದು ಗುರುತಿಸಿಕೊಳ್ಳಲು ಮರೆಯಲಾರ. ಹೀಗೆ ಭಾಷೆಯ ಅನನ್ಯತೆ ವ್ಯಕ್ತಿಯನ್ನು ಆಯಾ ಭಾಷೆಯ ಸಂಸ್ಕೃತಿಯೊಂದಿಗೆ ವ್ಯಕ್ತಿತ್ವದಲ್ಲಿ ಮೇಳವಿಸಿರುತ್ತದೆ.

 ಅದೇ ರೀತಿ ಆಯಾ ಭಾಷೆಗೆ ಸಂಬಂಧಪಟ್ಟ ಜಾನಪದ ಕಲೆಗಳ ಉಳಿಯುವಿಕೆ ಕರ್ನಾಟಕದಲ್ಲಿ ಕನ್ನಡದ ಉಪಭಾಷೆಗಳು ಹಾಗೂ ಇತರ ಭಾಷಾಪಂಗಡಗಳು ತಮ್ಮದೇ ಯಲ್ಲಿ ಭಾಷಾ ಅನನ್ಯತೆಯು ಮಹತ್ವದ ಪಾತ್ರವಹಿಸುತ್ತದೆ . ಉದಾಹರಣೆಗೆ: ಆದ ಜಾನಪದ ಕಲೆಗಳನ್ನು ಹೊಂದಿವೆ. ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದಲ್ಲಿ ಜಾನಪದ ಕಲೆ (ಇವನ್ನು ಚರ್ಚಾಸ್ಪದ) ಯಾದ ಯಕ್ಷಗಾನವು ಜಗತ್ಪಸಿದ್ಧವಾಗಿದೆ ಎಂದು ಹೇಳಬಹುದು. ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಕಂಪನಿಯ ಜಾಹೀರಾತುಗಳಲ್ಲಿ ಯಕ್ಷಗಾನ ಕಲೆಯನ್ನು ಅಳವಡಿಸಿಕೊಂಡಿರುವುದು ಇದಕ್ಕೆ ಸಾಕ್ಷಿ, ಜಾನಪದ ಕಲೆ ಆಯಾ ಭಾಷೆಯವರಿಂದ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಸಾಗುತ್ತ * ಉಳಿದುಕೊಂಡು ಬಂದಿದೆ . ಹೀಗೆ ವಿವಿಧ ಭಾಷಾ ಜನರ ಸುಗ್ಗಿ ಕುಣಿತ, ಕಂಬಳ, ಹಗಣ, ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ - ಮುಂತಾದ ಜಾನಪದ ಕಲೆಗಳು ಆಯಾ ಭಾಷಿಕ ಜನರಿಂದ ಸಂಪ್ರದಾಯಬದ್ಧವಾಗಿ ಉಳಿದುಕೊಂಡು ಬರಲು ಆಯಾ ಭಾಷಾ ಜನರಲ್ಲಿನ ಭಾಷಾ ಅನನ್ಯತೆಯೇ ಕಾರಣ.

ವ್ಯಕ್ತಿಯಲ್ಲಿರುವ ಭಾಷಾ ಅನನ್ಯತೆಯು ಯಾವತ್ತೂ ವ್ಯಕ್ತಿಯನ್ನು ತನ್ನ ಭಾಷಾ ವಿಷಯದಲ್ಲಿ ಜಾಗ್ರತನಾಗಿರುವಂತೆ ಪ್ರೋತ್ಸಾಹಿಸುತ್ತದೆ . ಆದ್ದರಿಂದ ತನ್ನ ಭಾಷೆಯ ಕುರಿತು ಏನೇ ಸಮಸ್ಯೆ ಉದ್ಭವಿಸಿದರೂ ಆಯಾ ಭಾಷೆಯವರು ಒಂದಾಗಿ ತಮ್ಮ ಭಾಷೆ, ಸಂಸ್ಕೃತಿಯ ಉಳಿಯುವಿಕೆಗಾಗಿ ಹೋರಾಟದಲ್ಲಿ ತೊಡಗುತ್ತಾರೆ.

ಆದ್ದರಿಂದಲೇ ಭಾಷಾ ಅನನ್ಯತೆಯು ಕೆಲವೊಮ್ಮೆ ತೊಡಕುಗಳನ್ನು ತಂದೊಡ್ಡುತ್ತದೆ. ಮುಖ್ಯವಾಗಿ ಪ್ರಾದೇಶಿಕ ಆಯ್ಕೆಯ ಸಂದರ್ಭಗಳಲ್ಲಿ, ರಾಷ್ಟ್ರೀಯ ಭಾಷೆಯ ಆಯ್ಕೆಯ ಸಂದರ್ಭಗಳಲ್ಲಿ ಇದು ಸರಕಾರಕ್ಕೆ ಬಗೆಹರಿಸಲಾಗದ ಸಮಸ್ಯೆ ಯಾಗಬಹುದು. ಒಂದು ಪ್ರದೇಶದಲ್ಲಿ ದ್ವಿಭಾಷೀಯ ಅಥವಾ ತ್ರಿಭಾಷಿಯ ಬಹು ಸಂಖ್ಯಾತ ಜನರಿದ್ದರಂತೂ ಸಮಸ್ಯೆ ತುಂಬಾ ಜಟಿಲವಾಗುತ್ತದೆ. (ಮುಂದೆ ' ಭಾಷಾ ರಾಜಕಾರಣ ' ಅಧ್ಯಾಯದಲ್ಲಿ ಕುರಿತು ಸವಿಸ್ತಾರವಾಗಿ ವಿವರಿಸಲಾಗಿದೆ) . ಹೀಗೆ ವ್ಯಕ್ತಿಯ ಭಾಷಾ ಅನನ್ಯತೆಯು ಸಮಸ್ಯೆಗಳನ್ನು ತಂದೊಡ್ಡುತ್ತದೆ . ಭಾಷೆ - ಭಾಷೆಗಳ ನಡುವೆ ವಿವಾದಗಳನ್ನು ಸೃಷ್ಟಿಸಿ ಹೋರಾಟ ಪ್ರಾರಂಭವಾಗಿ ನಂತರ ಇದು ಜಾತೀಯ ಹೋರಾಟವಾಗಿ ಅಂತ್ಯಗೊಳ್ಳುವ ಸಮಸ್ಯೆಯೂ ಭಾಷಾಅನನ್ಯತೆ ಉಂಟು ಮಾಡುತ್ತದೆ.

ಭಾಷೆ ವೈವಿಧ್ಯಮಯವಾಗಿರುವಷ್ಟೂ ಭಾಷೆಗಳಿಗೊಂದರಂತೆ ಜಾತಿಗಳಿವೆ, ಆದ್ದರಿಂದ ಭಾಷೆಯ ಸಮಸ್ಯೆ ಜಾತಿಯ ಸಮಸ್ಯೆಯಾಗಿ ಪರಿಣಮಿಸುವ ಸಂದರ್ಭಗಳೇ ಹೆಚ್ಚಾಗಿರುತ್ತವೆ. ಆದ್ದರಿಂದ ಭಾಷಾಅನನ್ಯತೆ ಧನಾತ್ಮಕ ದಿಶೆಯತ್ತ ಬಳಕೆಯಾದಾಗ ಅದು ಸಮಾಜದ ಒಳಿತಿಗೆ ಕಾರಣವಾಗುತ್ತದೆ ಹಾಗೂ ಋಣಾತ್ಮಕ ದಿಶೆಯತ್ತ ಬಳಕೆಯ ದಾಗ ಸಮಾಜದಲ್ಲಿ ಸಮಸ್ಯೆಗಳು ಉದ್ಭವಿಸಲು ಕಾರಣವಾಗುತ್ತದೆ.

ಆದ್ದರಿಂದ ಯಾವಾಗಲೂ ವ್ಯಕ್ತಿಯಲ್ಲಿರುವ ಭಾಷಾ ಅನನ್ಯತೆಯು ಅಭಿಮಾನ ದಿಂದ ತನ್ನ ಭಾಷಾ ಏಳಿಗೆ ತನ್ಮೂಲಕ ಆ ಭಾಷೆಯ ಸಂಸ್ಕೃತಿ, ಸಂಪ್ರದಾಯ, ಸಾಮಾಜಿಕ ಮೌಲ್ಯಗಳು, ಆಚರಣೆಗಳ ಉಳಿಯುವಿಕೆಯತ್ತ ಬಳಕೆಯಾಗಬೇಕು. ಇದರಿಂದ ಭಾಷೆಯ ಏಳಿಗೆಯ ಜೊತೆಯಲ್ಲಿ ಸಾಮಾಜಿಕ ಏಳಿಗೆಯೂ ಸಾಧ್ಯವಾಗುತ್ತದೆ.

Comments

Popular posts from this blog

ಭಾಷೆಯ ವಿವಿಧ ಘಟಕಾಂಶಗಳು

UDP Language syllabus in Kannada