c ) ಶಾಸ್ತ್ರೀಯ ಭಾಷೆ ( Classical Language )
c ) ಶಾಸ್ತ್ರೀಯ ಭಾಷೆ ( Classical Language ) : ಈಗಾಗಲೇ ಚರ್ಚಿಸಿದಂತೆ ಒಂದು ವಿಶಾಲವಾದ ಪ್ರದೇಶದಲ್ಲಿ ವಿಶಾಲ ಸಮುದಾಯದಲ್ಲಿ ಹಲವಾರು ಉಪಭಾಷೆಗಳನ್ನು ಬಳಸುವ ಚಿಕ್ಕ ಚಿಕ್ಕ ಪಂಗಡಗಳಿದ್ದರೂ ಈ ಎಲ್ಲಾ ಪಂಗಡದ ಜನರಿಗೆ ಸೇರಿ ವಿಶಾಲ ಸಮುದಾಯದಲ್ಲಿ ಜನರೆಲ್ಲರಿಗೆ ಒಂದು ಶಿಷ್ಟ ಭಾಷೆಯಿರುತ್ತದೆ. ಇದು ಆ ಸಮುದಾಯದ ಶೈಕ್ಷಣಿಕ, ಆಡಳಿತ, ನ್ಯಾಯಯುತವಾದ ಹಾಗೂ ಅಧಿಕೃತವಾಗಿ ಗ್ರಂಥಸ್ಥ ಭಾಷೆಯಾಗಿರುತ್ತದೆ. ಒಂದು ವೇಳೆ ಈ ಭಾಷೆ ತನ್ನದೇ ಆದಂತಹ ಪಾರಂಪರಿಕವಾದ ವಿಶಾಲ ಸಾಹಿತ್ಯವನ್ನು ಹೊಂದಿದ್ದು ಕ್ರಮೇಣ ಗ್ರಂಥಸ್ಥವಾಗಿ ಮಾತ್ರ ಉಳಿದು ಸಾಮಾಜಿಕ ಸಂಪರ್ಕದಿಂದ ದೂರವಾದಲ್ಲಿ ಇದನ್ನು ಶಾಸ್ತ್ರೀಯ ಭಾಷೆ ಎಂದು ಕರೆಯಲಾಗಿದೆ. ಇದು ಜಗತ್ತು 'ಶಾಸ್ತ್ರೀಯ ಭಾಷೆಗೆ ನೀಡಿದ ಪರಿಕಲ್ಪನೆಯಾಗಿದೆ.
ಶಿಕ್ಷಣಶಾಸ್ತ್ರದ ಪಾರಿಭಾಷಿಕ ನಿಘಂಟಿನ ಪ್ರಕಾರ “ಶಾಸ್ತ್ರೀಯ ಭಾಷೆ ಎಂದರೆ ಸಾಂಪ್ರದಾಯಿಕ ಭಾಷೆ ಪ್ರತಿಷ್ಠಿತ ಭಾಷೆ, ಲಾಕ್ಷಣಿಕ ಭಾಷೆ, ಮೂಲರೂಪದ ಭಾಷೆ, ರಾಷ್ಟ್ರೀಯ ಸಂಸ್ಕೃತಿ, ಮನೋಭಾವಾದಿಗಳನ್ನು ಪ್ರತಿನಿಧಿಸುವಂತಹ ಪ್ರತಿಷ್ಠಿತ ಭಾಷೆ ಉದಾಹರಣೆಗೆ : ಸಂಸ್ಕೃತ, ಪರ್ಶಿಯನ್, ಗ್ರೀಕ್, ಲ್ಯಾಟಿನ್ ಮುಂತಾದ ಸಂಪ್ರದಾಯಬದ್ಧ ಭಾಷೆಗಳು.
ಪ್ರಾಚೀನ ಜಗತ್ತಿನ ಪರಿಕಲ್ಪನೆಯಲ್ಲಿ ಪ್ರತಿಷ್ಠಿತ, ಸಾಂಪ್ರದಾಯಿಕ, ಸಾಹಿತ್ಯಕವಾಗಿ ಸಂಬಪದ್ಭರಿತವಾದ ಮೃತಭಾಷೆಗಳು ಶಾಸ್ತ್ರೀಯ ಭಾಷೆಗಳಾಗಿವೆ. ಆದ್ದರಿಂದ ಜಗತ್ತು ಒಪ್ಪಿಕೊಂಡ ಪ್ರಕಾರ ಭಾರತದಲ್ಲಿ ಶಾಸ್ತ್ರೀಯ ಭಾಷೆಯೆಂದರೆ 5000 ವರ್ಷಗಳಿಗಿಂತ ಹೆಚ್ಚು ಪ್ರಾಚೀನವಾದಂತಹ, ಸಂಪದ್ಭರಿತವಾದ ಸಾಹಿತ್ಯವನ್ನು ಹೊಂದಿರುವ, ವ್ಯವಹಾರಿಕವಾಗಿ ಅಸ್ತಿತ್ವ ಕಳೆದುಕೊಂಡ ಸಂಸ್ಕೃತ ಮಾತ್ರ. ಆದರೆ ಭಾರತದ ಪರಿಕಲ್ಪನೆಯಲ್ಲಿ ಶಾಸ್ತ್ರೀಯ ಭಾಷೆ'ಯೆಂದರೆ ಸರಕಾರ ನೀಡುವ ಅಧಿಕೃತ ಸ್ಥಾನಮಾನ (Official Status) ಆಗಿದೆ.
ಭಾಷಾ ತಜ್ಞರ ಪ್ರಕಾರ - " A classical language is alanguage with a literature that is classical " (ಶಾಸ್ತ್ರೀಯ ಭಾಷೆಯು ಶಾಸ್ತ್ರೀಯವಾದಂತಹ ಸಾಹಿತ್ಯವನ್ನು ಹೊಂದಿರಬೇಕು.)
According to university of California Berkely linguist George. L. Hart - " classical language should be ancient , it should be independent tradition that arase mostly on its own , not as an offshat of another tradition an it must have a large and extermely rich body of ancient literature."
(ಶಾಸ್ತ್ರೀಯ ಭಾಷೆಯು ಪ್ರಾಚೀನವಾಗಿರಬೇಕು. ಇದು ತನ್ನದೇ ಆದಂತಹ ಸಂಪ್ರ ದಾಯವನ್ನು (ಪರಂಪರೆಯನ್ನು ಹೊಂದಿರಬೇಕು. ಈ ಸಂಪ್ರದಾಯ ಬೇರೆ ಭಾಷೆಯ ಪ್ರಭಾವಕ್ಕೆ ಒಳಗಾಗಿರದೇ ಸ್ವಂತದ್ದಾಗಿರಬೇಕು ಹಾಗೂ ತನ್ನದೇ ಆದ ವಿಶಾಲವಾದ ಸಂಪದ್ಭರಿತವಾದ ಶ್ರೇಷ್ಠ ಮಟ್ಟದ ಪ್ರಾಚೀನ ಸಾಹಿತ್ಯವನ್ನು ಹೊಂದಿರಬೇಕು)
ಯುರೋಪಿನ ಶಾಸ್ತ್ರೀಯ ಭಾಷಾಧ್ಯಯನದ ಪ್ರಕಾರ ಪ್ರಾಚೀನ ಶಾಸ್ತ್ರೀಯ ಭಾಷೆಗಳೆಂದರೆ ಗ್ರೀಕ್ ಮತ್ತು ಲ್ಯಾಟಿನ್, ಇವು ಪ್ರಾಚೀನ ಯುರೋಪಿನಲ್ಲಿ ಆಡು ಭಾಷೆಗಳಾಗಿದ್ದವು. ಇವು ಸಂಪದ್ಭರಿತವಾದ ಸಾಹಿತ್ಯವನ್ನು ಹೊಂದಿದ್ದು ಶಾಸ್ತ್ರೀಯ ಭಾಷಾ ಲಕ್ಷಣಗಳನ್ನು ಹೊಂದಿರುವ ಕಾರಣ ಯುರೋಪಿಯನ್ನರು ಕ್ರಮೇಣ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳನ್ನು ಶಾಸ್ತ್ರೀ ಯ ಭಾಷೆಗಳೆಂದು ಒಪ್ಪಿಕೊಂಡರು. ಇವು ಜಗತ್ತಿನ ಪ್ರಾಚೀನ ಶಾಸ್ತ್ರೀಯ ಭಾಷೆಗಳಾಗಿವೆ.
ಭಾರತದಲ್ಲಿ ಭಾಷಾವೈವಿಧ್ಯತೆಯಿದೆ. ಇಲ್ಲಿ ಇಂಡೋ- ಆರ್ಯನ್ ಮತ್ತು ಡ್ರೈವೆಡಿಯನ್ (ದ್ರಾವಿಡ ಭಾಷೆಗಳೆಂಬ ಎರಡು ಪ್ರಮುಖ ಭಾಷಾ ಗುಂಪುಗಳಿವೆ.
ಪ್ರಸ್ತುತದಲ್ಲಿ ಇಂಡೋ ಆರ್ಯನ್ ಭಾಷೆಗಳನ್ನು 75 % ಜನರು ಬಳಸುತ್ತಿದ್ದಾರೆ, ದ್ರಾವಿಡ ಭಾಷೆಗಳನ್ನು 20 % ಮತ್ತು ಉಳಿದ ಭಾಷೆಗಳನ್ನು 5 % ಜನರು ಬಳಸುತ್ತಿದ್ದಾರೆ (ಸೈನೊಟಿಬೆಟಿಯನ್, ಆಸ್ಕೋ - ಏಷಿಯಾಟಿಕ್ ) ಇತ್ಯಾದಿ.
ಭಾರತದ ಪರಿಕಲ್ಪನೆಯಲ್ಲಿ ಶಾಸ್ತ್ರೀಯ ಭಾಷೆಯೆಂದರೆ ಈಗಾಗಲೇ ಹೇಳಿದಂತೆ ಪ್ರಸ್ತುತದಲ್ಲಿ , ಸ್ವತಂತ್ರ ಭಾರತದಲ್ಲಿ ಸರಕಾರ ನೀಡುತ್ತಿರುವ ಅಧಿಕೃತ ಸ್ಥಾನಮಾನ ( Official Status ) ಆಗಿದೆ . ಇದು ಸಾಹಿತ್ಯಕವಾಗಿ ಸಂಪದ್ಭರಿತವಾಗಿದ್ದು , ಸಾಮಾಜಿಕ ಸಂಪರ್ಕ ಭಾಷೆಯಾಗಿ ಬಳಕೆಯಾಗುತ್ತಿರುವ ಅಥವಾ ಆಗದಿರುವ ಭಾಷೆಗೆ ನೀಡುವ ಗೌರವವಾಗಿದೆ.
ಈ ರೀತಿಯಲ್ಲಿ ಭಾರತ ಸರಕಾರವು ಮೊಟ್ಟ ಮೊದಲು ಶಾಸ್ತ್ರೀ ಯ ಭಾಷಾ ಸ್ಥಾನಮಾನ ನೀಡಿದ ಭಾಷೆಯೆಂದರೆ ತಮಿಳು(2004) ಸಂಸ್ಕೃತ (2005) ಕನ್ನಡ (2008) ತೆಲಗು (2008) ಮಲಯಾಳಂ (2013) ಓಡಿಯಾ (2014) ಈ ಇಷ್ಟು ಭಾಷೆಗಳು ಭಾರತದಲ್ಲಿ ಸರಕಾರದಿಂದ ಶಾಸ್ತ್ರೀಯಭಾಷಾ ಸ್ಥಾನಮಾನ ಪಡೆದು ಕೊಂಡಿವೆ.
Comments
Post a Comment