b ) ಪ್ರಮಾಣೀಕೃತ ಮತ್ತು ಅಪ್ರಮಾಣೀಕೃತ ಭಾಷೆ ( Standard and Non - Standard Language ) ಪ್ರಮಾಣೀಕೃತಭಾಷೆ ( Standard Language ) :

 

b ) ಪ್ರಮಾಣೀಕೃತ ಮತ್ತು ಅಪ್ರಮಾಣೀಕೃತ ಭಾಷೆ ( Standard and Non - Standard Language ) ಪ್ರಮಾಣೀಕೃತಭಾಷೆ ( Standard Language ) :

 ಯಾವುದೇ ಒಂದು ವಿಶಾಲವಾದ ಭೌಗೋಳಿಕ ಸಮುದಾಯವು ತನ್ನದ ಆ ಆದಂತಹ ಭಾಷೆಯನ್ನು ಹೊಂದಿರುತ್ತದೆ . ಈ ವಿಶಾಲ ಸಮುದಾಯದಲ್ಲಿ ದ್ವಿಭಾಷೀಯ ಜನರಿರಬಹುದು ಅಥವಾ ಬಹುಭಾಷಾ ಜನರಿರಬಹುದು.

ಉಪ ಭಾಷೆಗಳು ಹಲವಾರು ಇದ್ದರೂ ಈ ಎಲ್ಲ ಜನರಿಗೂ ಸೇರಿ ವಿಶಾಲ ಪ್ರಮಾಣ ಬದ್ದ ಭಾಷೆಯಾಗಿರುತ್ತದೆ. ಈ ಭಾಷೆಯನ್ನು ಆ ವಿಶಾಲ ಗುಂಪು ನಮ್ಮ ಸಮುದಾಯಕ್ಕೆ ಒಂದು ಅಧಿಕೃತ ಭಾಷೆ ಇರುತ್ತದೆ. ಇದು ಪ್ರಮಾಣೀಕೃತ ಅಥವಾ ಪ್ರಾದೇಶಿಕ ಭಾಷೆಯಾಗಿ ಒಪ್ಪಿಕೊಂಡಿರುತ್ತದೆ.

ಪ್ರಮಾಣೀಕೃತ ಭಾಷೆಯ ಲಕ್ಷಣಗಳು

1. ಆಯಾ ವಿಶಾಲ ಸಮುದಾಯದ ವ್ಯಾವಹಾರಿಕ , ಸಾಮಾಜಿಕ ಸಂಪರ್ಕ ಭಾಷೆಯಾಗಿರುತ್ತದೆ.

2. ಹಲವಾರು ಉಪಭಾಷಾ ಸಮುದಾಯವೂ ಈ ಪ್ರಮಾಣೀಕೃತ ಭಾಷೆಯನ್ನು ಅಧಿಕೃತವಾಗಿ ವ್ಯವಹಾರದಲ್ಲಿ ಬಳಸುತ್ತಿರುತ್ತಾರೆ.

3. ತನ್ನದೇ ಆದಂತಹ ಲಿಪಿಯನ್ನು ಹೊಂದಿರುತ್ತದೆ.

4. ತನ್ನದೇ ಆದ ಸಂಪದ್ಭರಿತವಾದ ಸಾಹಿತ್ಯವನ್ನು ಹೊಂದಿರುತ್ತದೆ.

5. ಈ ಭಾಷೆ ಸರಕಾರದಿಂದ ಒಪ್ಪಿತವಾಗಿ ಅಧಿಕೃತವಾಗಿ ದೃಢೀಕೃತ ಭಾಷೆಯಾಗಿರುತ್ತದೆ.

6. ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಭಾಷೆಯಾಗಿ ಚಾಲ್ತಿಯಲ್ಲಿರುತ್ತದೆ.

7. ಈ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿಯೂ ಆಯ್ಕೆ ಮಾಡಲಾಗಿರುತ್ತದೆ.

8. ಪಠ್ಯಪುಸ್ತಕದ ಮುಖ್ಯ ಭಾಷೆಯಾಗಿರುತ್ತದೆ.

9. ಇದು ಪ್ರಧಾನ ಭಾಷೆಯಾದರೂ ಉಪಭಾಷೆಗಳನ್ನು ಆಧೀನ ಭಾಷೆಯಾಗಿ ಪರಿಗಣಿಸುವುದಿಲ್ಲ.

10. ಉಪಭಾಷೆಗಳ ಪ್ರಭಾವಕ್ಕೆ ಒಳಗಾದರೂ ಸಹ ಸಾಹಿತ್ಯಕವಾಗಿ ಗ್ರಂಥಸ್ಥವಾಗಿ ಬದಲಾವಣೆಗೆ ಒಳಪಡುವುದಿಲ್ಲ.

ಅಪ್ರಮಾಣಿಕೃತ ಭಾಷೆ ( Non - standard Language ) : ಒಂದು ವಿಶಾಲವಾದಂತಹ ಭೌಗೋಳಿಕ ಪ್ರದೇಶದಲ್ಲಿ ಮುಖ್ಯ ಪ್ರಮಾಣೀಕೃತ ಭಾಷೆಯಿದ್ದರೂ ಹಲವಾರು ಉಪಭಾಷೆಗಳಿರುತ್ತವೆ. ಇವು ಚಿಕ್ಕ ಚಿಕ್ಕ ಪಂಗಡಗಳ ಭಾಷೆಯಾಗಿರುತ್ತವೆ. ಇವುಗಳಿಗೆ ಅಧಿಕೃತ ಸ್ಥಾನಮಾನವಿರುವುದಿಲ್ಲ. ಸರಕಾರದಿಂದ ಅಧಿಕೃತ ಭಾಷೆಯಾಗಿ ಗೌರವ ದೊರಕಿರುವುದಿಲ್ಲ.

ಅಪ್ರಮಾಣಿಕೃತ ಭಾಷೆಯ ಲಕ್ಷಣಗಳು :

1. ಚಿಕ್ಕ ಚಿಕ್ಕ ಪಂಗಡಗಳಲ್ಲಿ ವ್ಯಾವಹಾರಿಕವಾಗಿ ಚಾಲ್ತಿಯಲ್ಲಿರುತ್ತದೆ.

2. ಆಯಾ ಪಂಗಡಗಳಲ್ಲಿ ಮಾತ್ರ ಸಾಮಾಜಿಕ ಸಂಪರ್ಕ ಭಾಷೆಯಾಗಿರುತ್ತದೆ.

3. ಸಾಮಾನ್ಯವಾಗಿ ತನ್ನದೇ ಆದ ಲಿಪಿಯನ್ನು ಹೊಂದಿರುವುದಿಲ್ಲ.

4. ಸಂಪದ್ಭರಿತ ಸಾಹಿತ್ಯವನ್ನು ಹೊಂದಿರುವುದಿಲ್ಲ.

5. ಆಯಾ ಪ್ರದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಥಾನಮಾನ ದೊರೆತಿರುವುದಿಲ್ಲ.

6. ಗ್ರಂಥಸ್ಥ ಭಾಷೆಯಾಗಿರುವುದಿಲ್ಲ.

7 , ಪಠ್ಯಪುಸ್ತಕಗಳಲ್ಲಿ ಅಳವಡಿಸಿರುವ ಭಾಷೆಯಾಗಿರುವುದಿಲ್ಲ.

8. ಹಲವೊಮ್ಮೆ ಪ್ರಮಾಣೀಕೃತ ಭಾಷೆಯ ಪ್ರಭಾವಕ್ಕೆ ಒಳಗಾಗಿರುತ್ತದೆ.

9. ಶಿಕ್ಷಣ ಮಾಧ್ಯಮವಾಗಿ ಬಳಸಲ್ಪಡುವುದಿಲ್ಲ.

10. ಅಪ್ರಮಾಣೀಕೃತ ಭಾಷಿಗರು ಪ್ರಮಾಣೀಕೃತ ಭಾಷೆಯನ್ನೇ ಆಧಿಕೃತವಾಗಿ ವ್ಯವಹಾರಗಳಲ್ಲಿ ಬಳಸುತ್ತಿರುತ್ತಾರೆ.

Comments

Popular posts from this blog

ಭಾಷೆಯ ವಿವಿಧ ಘಟಕಾಂಶಗಳು

UDP Language syllabus in Kannada

ಭಾಷಾ ಅನನ್ಯತೆ ( Language Identity )