3. ಭಾಷಾ ರಾಜಕಾರಣ ( Language Politics )

 

 


3. ಭಾಷಾ ರಾಜಕಾರಣ ( Language Politics )

ಒಂದು ರಾಷ್ಟ್ರ ಅಥವಾ ರಾಜ್ಯದಲ್ಲಿ ಬಹುಭಾಷಾ ಸನ್ನಿವೇಶವಿದ್ದಾಗ 'ಭಾಷೆ ಎನ್ನುವುದು ಸರಕಾರಕ್ಕೆ ತೊಡಕಾಗಿ ಪರಿಣಮಿಸುತ್ತದೆ. ಜಗತ್ತಿನ ಬಹುತೇಕ ಗಳಲ್ಲಿ, ರಾಜ್ಯಗಳಲ್ಲಿ ಈ ಪರಿಸ್ಥಿತಿಯಿದೆ. ಜಗತ್ತಿನಲ್ಲಿಯೇ ಬಹುಭಾಷಿಕತೆಗೆ ಉತ್ತಮ ಉದಾಹರಣೆ ಭಾರತ. ಭಾರತದಲ್ಲಿ ಸುಮಾರು 1652 ವರ್ಗೀಕೃತ ಭಾಷೆಗಳು ಹಾಗೆ 184 ಆವರ್ಗೀಕೃತ ಭಾಷೆಗಳೂ ಇವೆಯೆಂದು 1961 ರ ಜನಗಣತಿ ಗುರುತಿಸಿದೆ. ಅಂದರೆ ಒಟ್ಟು 1836 ಭಾಷೆಗಳಿವೆ. ಅಲ್ಲದೇ ರಾಜ್ಯವಾರು ಮತ್ತೆ ಪ್ರತ್ಯೇಕವಾಗಿ ಬಹುಭಾಷಿಕಯಿರುವುದೂ ಭಾರತದ ಒಂದು ವೈಶಿಷ್ಟ್ಯ. ಇಂತಹ ಸಂದರ್ಭಗಳಲ್ಲಿ ಇದು ಪ್ರಾದೇಶಿಕ ವಾಗಿ ಸರಕಾರಗಳಿಗೆ ಬಹಳಷ್ಟು ಗೊಂದಲಮಯ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ.

ಮುಖ್ಯವಾಗಿ ಒಂದು ವಿಶಾಲವಾದ ಪ್ರದೇಶದಲ್ಲಿ ಒಂದು ಸರಕಾರವಿದ್ದಾಗ ಆ ಸರಕಾರವು ಆ ಪ್ರದೇಶದ ಬಹುಸಂಖ್ಯಾತರು ಮಾತನಾಡುವ ಒಂದು ಭಾಷೆಯನ್ನು ಆಡಳಿತಭಾಷೆಯಾಗಿ, ಪ್ರಾದೇಶಿಕ ಭಾಷೆಯಾಗಿ ಅಧಿಕೃತವಾಗಿ ಜಾರಿಗೆ ತರಬೇಕಾಗುತದೆ. ಈ ರೀತಿಯಲ್ಲಿ ಸರಕಾರ ಪ್ರಾದೇಶಿಕ ಭಾಷೆಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಭಾಷಾರಾಜಕಾರಣ ಅಥವಾ ಭಾಷಾ ರಾಜಕೀಯ ಎಂದು ಹೇಳಲಾಗುತ್ತದೆ.

ಈ ಭಾಷಾ ರಾಜಕಾರಣವು ಭಾಷೆಗೆ ಸಂಬಂಧಪಟ್ಟಂತೆ ಸರಕಾರದ ಅನೇಕಾನೇಕ ನಿಲುವುಗಳನ್ನು ಒಳಗೊಂಡಿದೆ . ಭಾಷಾ ವಿಚಾರದಲ್ಲಿ ಆಡಳಿತ ಸರಕಾರ ಮತ್ತು ಜನರ ಎಲ್ಲ ರೀತಿಯ ವಿವಾದಗಳು (Issues), ಆಗುಹೋಗುಗಳು ಭಾಷಾ ರಾಜಕಾರಣಕ್ಕೆ ಸಂಬಂಧಿಸಿದೆ.

ಸರಕಾರ ಪ್ರಾದೇಶಿಕ ಭಾಷೆ ಆಯ್ಕೆ ಮಾಡುವುದು ಸುಲಭದ ಕಾರ್ಯವಲ್ಲ ಅದೇ ರೀತಿ ಬಹುಭಾಷಿಕ ರಾಷ್ಟ್ರದಲ್ಲಿ ರಾಷ್ಟ್ರಭಾಷೆಯ ಆಯ್ಕೆ ಇನ್ನೂ ಕಷ್ಟಕರ. ಇಲ್ಲಿ ವಿವಿಧ ಸಾಮಾಜಿಕ ಗುಂಪುಗಳು ತಮ್ಮ ತಮ್ಮ ಭಾಷಾ ವ್ಯಕ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಕಾರ್ಯಾಶಕ್ತಿಯಿಂದಾಗಲೀ ಅಥವಾ ಹಿಂಸಾತ್ಮಕವಾಗಿಯಾಗಲೀ ಪ್ರಯತ್ನಿಸುತ್ತಾರೆ. ಸರ್ಕಾರಗಳು ಇವುಗಳಿಗೆ ಅಧಿಕೃತವಾಗಿ ಅಥವಾ ಅನಧಿಕೃತವಾಗಿ ಪ್ರತಿಕ್ರಿಯಿಸ ಬೇಕಾಗುತ್ತದೆ. ಆ ಪ್ರತಿಕ್ರಿಯೆ ಸೂಕ್ತವಾಗಿರಬೇಕಾಗುತ್ತದೆ. ಸರಕಾರಗಳ ಇಂತಹ ಭಾಷಾ ಸಮಸ್ಯೆಗಳನ್ನು ಪರಿಹರಿಸಿದರೆ ಸರಿ, ಇಲ್ಲವೆಂದರೆ ಈ ಸಮಸ್ಯೆಗಳು ಜಟಿಲಗೊಳ್ಳುತ್ತಲೇ ಸಾಗುತ್ತವೆ. ಕೆಲವೊಮ್ಮೆ ಆಯಾ ಪ್ರದೇಶದ ಸಾಮಾಜಿಕ ಸನ್ನಿವೇಶಗಳು ಮತ್ತು ಧಾರ್ಮಿಕ ಪ್ರವೃತ್ತಿಗಳು ಸರಕಾರಕ್ಕಿಂತ ಶಕ್ತಿಶಾಲಿಯಾಗಿ ಭಾಷಾ ನಿರ್ಣಯದ ವಿಷಯದಲ್ಲಿ ಕಾರ್ಯ ನಿರ್ವಹಿಸುತ್ತವೆ.

ರಾಷ್ಟ್ರಭಾಷೆಯ ನಿರ್ಣಯವಾಗಲೀ, ಪ್ರಾದೇಶಿಕ ಭಾಷೆಯ ನಿರ್ಣಯವಾಗಲೀ ಪ್ರದೇಶದ ಆಡಳಿತ, ನ್ಯಾಯ ನಿರ್ಣಯ, ಸಾಮಾಜಿಕ ಕಾರ್ಯಗಳು, ಶಿಕ್ಷಣ ವ್ಯವಸ್ಥೆ ಅತ್ಯಂತ ಸೂಕ್ಷ್ಮತರವಾದ ವಿಚಾರವಾಗಿದೆ. ಭಾಷೆಗಳು ಆಯಾ ರಾಷ್ಟ್ರದ ಮತ್ತು ಇತ್ಯಾದಿಗಳ ಮೇಲೆ ಪ್ರಭಾವ ಬೀರುತ್ತವೆ. ಆದ ಕಾರಣ ಆಯಾ ಪ್ರದೇಶದ ಬಹು ಸಂಖ್ಯಾತರ ಶಿಷ್ಟ ಭಾಷೆಯನ್ನು ರಾಷ್ಟ್ರಭಾಷೆಯಾಗಿ ಅಥವಾ ಪ್ರಾದೇಶಿಕ ಭಾಷೆಯಾಗಿ ಆಯ್ಕೆ ಮಾಡಬೇಕಾಗುತ್ತದೆ. ಇಲ್ಲಿ ಒಂದು ಪ್ರದೇಶದಲ್ಲಿ ಎರಡು ಮೂರು ಭಾಷೆಯ ತಮ್ಮನ್ನು ಭಾಷೆಯೊಂದಿಗೆ ಗುರುತಿಸಿಕೊಳ್ಳುವ ಬಹುಸಂಖ್ಯಾತ ಜನ ತಮ್ಮ ತಮ್ಮ ಬಹುಸಂಖ್ಯಾತರಿದ್ದಾಗ ಸಮಸ್ಯೆ ಜಟಿಲವಾಗುತ್ತದೆ. ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಭಾಷೆಗಳು ಅಧಿಕೃತವಾಗಿ ರಾಷ್ಟ್ರಭಾಷೆ ಅಥವಾ ಪ್ರಾದೇಶಿಕ ಭಾಷೆಗಳಾಗಲು ಹೆಣಗಾಡು ವುದು ಸಹಜವಾಗಿದೆ . ಭಾಷಾಭಿಮಾನ ಹಲವೊಮ್ಮೆ ಅತಿರೇಕವಾಗಿ ಸರಕಾರಕ್ಕೆ ದೊಡ್ಡ ತೊಡಕಾಗಿ ನಿರ್ಣಯಕ್ಕೆ ಬರಲೇ ಅಸಾಧ್ಯವಾಗುವದೂ ಉಂಟು ಉದಾಹರಣೆಗೆ : ಭಾರತದಲ್ಲಿ 'ರಾಷ್ಟ್ರಭಾಷೆ ' ನಿರ್ಣಯದ ವಿಚಾರವನ್ನೇ ತೆಗೆದುಕೊಳ್ಳಬಹುದು . ಹಿಂದೆ ಭಾರತದಲ್ಲಿ ರಾಷ್ಟ್ರಭಾಷೆ ಯಾವುದಾಗಿರಬೇಕೆಂಬ ಚರ್ಚೆ ಉದ್ಭವಿಸಿದಾಗ ಭಾರತದಲ್ಲಿ ಬಹುಸಂಖ್ಯಾತರು (40 %) ಹಿಂದಿ ಭಾಷೆ ಮಾತನಾಡುವ ಕಾರಣ ಹಿಂದಿ ಭಾಷೆಯನ್ನೇ ರಾಷ್ಟ್ರಭಾಷೆಯನ್ನಾಗಿ ಆಯ್ಕೆ ಮಾಡಬೇಕಾಗಿ ಶ್ರೀ ಸ್ವಾಮಿ ದಯಾನಂದ ಸರಸ್ವತೀ ಮಹರ್ಷಿಗಳು, ಮಹಾತ್ಮಾಗಾಂಧೀಜಿ ಮುಂತಾದ ಮಹಾಪುರುಷರು ಪ್ರೋತ್ಸಾಹಿಸಿದರು. ಆದರೆ ಇದರ ಕುರಿತು ದಕ್ಷಿಣ ಭಾರತದಲ್ಲಿ ವಿರೋಧ ವ್ಯಕ್ತವಾಯಿತು. ದಕ್ಷಿಣ ಭಾರತದ ಜನತೆಗೆ ಹಿಂದಿ ದೂರದ ಭಾಷೆಯಾಗಿರುವುದೇ ಇದಕ್ಕೆ ಕಾರಣ. ವಿರೋಧ ವಾದ - ವಿವಾದಗಳ ನಡುವೆ ಅಂದಿನ ಸರಕಾರವು 1950 ರಲ್ಲಿ ಸಂವಿಧಾನದ 380 ನೇ ವಿಧಿಯಲ್ಲಿ ಹಿಂದಿಯನ್ನು ರಾಷ್ಟ್ರದ ಅಧಿಕೃತ ಸಂಪರ್ಕ ಭಾಷೆ ಯೆಂದು ಒಪ್ಪಿಕೊಂಡಿತು. ಅಧಿಕೃತವಾಗಿ ರಾಷ್ಟ್ರಭಾಷೆಯೆಂಬುದಾಗಿ ಘೋಷಿಸಲಾಗಿಲ್ಲ. ಇದಕ್ಕೆ ಭಾಷಾ ಹಿತಾಸಕ್ತಿಗಳಿಂದ ವ್ಯಕ್ತವಾದ ವಿರೋಧವೇ ಕಾರಣ ಇದು ಭಾಷಾ ರಾಜಕಾರಣ . ನಿಜವಾಗಿ ಹೇಳಬೇಕೆಂದರೆ ನಮ್ಮ ದೇಶದಲ್ಲಿ ಇಡೀ ರಾಷ್ಟ್ರವನ್ನು ಸಾಮ ರಸ್ಯವಾಗಿ ಸಂಪರ್ಕಿಸುವ ಭಾಷೆಯನ್ನು ರಾಷ್ಟ್ರಭಾಷೆಯನ್ನಾಗಿ ಅಳವಡಿಸಿಕೊಳ್ಳಬೇಕು . ಆದರೆ ಭಾಷಾನೀತಿಗಳ ವಿಚಾರದಲ್ಲಿ ರಾಜಕೀಯ ಹಿತಾಸಕ್ತಿಗಳಿರುವುದರಿಂದ ಇಂತಹ ಸಂಘರ್ಷಕ್ಕೆ ಕಾರಣವಾಗುತ್ತದೆ.

ಇಸ್ರೇಲಿನಲ್ಲಿ ಹಿಬ್ರೂ ಭಾಷಾಜನ 74.9 % ಮಾತನಾಡುವ ಜೀಶ್ (Jewish) (ಯಹೂದಿ) ಜನರಿದ್ದರೂ, ಅರೇಬಿಕ್ ಭಾಷೆ ಪ್ರಬಲತೆ ತೋರಿತ್ತು ಆದರೆ ಸಾಮಾಜಿಕ ಸನ್ನಿವೇಶಗಳು, ಧಾರ್ಮಿಕ ಪ್ರವೃತ್ತಿಗಳು ಹಿಬ್ರೂ ಭಾಷೆ ಮರುಹುಟ್ಟು ಪಡೆಯಲು ಕಾರಣವಾದವು- ಅಲ್ಲದೇ ಅದನ್ನು ರಾಷ್ಟ್ರಭಾಷೆಯನ್ನಾಗಿ ಚಲಾವಣೆಗೆ ತರಬೇಕಾ ಯಿತು. ಇದು ಭಾಷಾ ರಾಜಕಾರಣ.

ಭಾಷಾ ರಾಜಕಾರಣ ಕೇವಲ ಪ್ರಾದೇಶಿಕ ಭಾಷೆ ಮತ್ತು ರಾಷ್ಟ್ರ ಭಾಷೆ ಗಳನ್ನಷ್ಟೇ ಗೊಂದಲಕ್ಕೀಡುಮಾಡುವುದಿಲ್ಲ. ಭಾಷೆಗೆ ಸಂಬಂಧ ಪಟ್ಟಂತೆ ಐತಿಹಾಸಿಕ, ರಾಜಕೀಯಾತ್ಮಕ , ಆರ್ಥಿಕ, ಧಾರ್ಮಿಕ, ಶೈಕ್ಷಣಿಕ, ನ್ಯಾಯಾತ್ಮಕ ಹಾಗೂ ಸಾಮಾಜಿಕ ಮತ್ತು ಸಾಂಸ್ಕೃತಿಕ ಎಲ್ಲ ವಿಷಯಗಳಲ್ಲಿಯೂ ತೊಡಕುಗಳನ್ನು, ವಿವಾದಗಳನ್ನು ರಾಜಕೀಯ ವಲಯದಲ್ಲಿ ಹುಟ್ಟು ಹಾಕುತ್ತದೆ.

ಸರಕಾರ ಮತಬ್ಯಾಂಕ್ ವೃದ್ಧಿಸಿಕೊಳ್ಳಲು ಅಲ್ಪಸಂಖ್ಯಾತ ಭಾಷೆಗಳಿಗೆ ಮಾನ್ಯತೆ ನೀಡಿ ಹೆಚ್ಚು ಹೆಚ್ಚು ಅವಕಾಶಗಳನ್ನು, ಲಾಭಗಳನ್ನು ಅವರಿಗೆ ಕೊಟ್ಟು ಅವರ ಅನುರಾಗ ಗಳಿಸಿಕೊಳ್ಳುವುದೂ ಭಾಷಾರಾಜಕಾರಣ.

ಒಂದು ಭಾಷೆಯು ಪ್ರದೇಶದ ಜನರನ್ನು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಭಾವನಾತ್ಮಕವಾಗಿ ' ನಾವೆಲ್ಲರೂ ಒಂದೇ ' ಎಂಬ ಭಾವನೆಯಿಂದ ಒಗ್ಗೂಡಿಸಿರುತ್ತದೆ. ಆದ್ದರಿಂದ ಭಾಷೆಯ ಆಯ್ಕೆಯ ವಿಷಯ ಬಂದಾಗ ಅದು ಜನರ ಭಾವನಾತ್ಮಕ ವಿಷಯವಾಗಿ ಸಾಮಾಜಿಕವಾಗಿ ದೊಡ್ಡ ಪ್ರಕರಣವಾಗುತ್ತದೆ.

 ಬೆಲ್ಸಿಯಂನಲ್ಲಿ ಮುಖ್ಯವಾಗಿ 59% ಡಚ್ ಭಾಷೆ ಮಾತನಾಡುವ ಜನರಿದ್ದಾರೆ , 41% ರಷ್ಟು ಫ್ರೆಂಚ್ಮಾತನಾಡುವ ಜನರಿದ್ದಾರೆ. ಹಾಗೂ ಜಲ್ಮನ್ ಭಾಷೆ ಮಾತನಾಡುವ ಸಣ್ಣ ಗುಂಪಿದೆ. ಇಲ್ಲಿ ಆಡಳಿತತ್ಮಾಕವಾಗಿ ಯಾವ ಭಾಷೆ ಆಯ್ಕೆ ಮಾಡಬೇಕೆಂಬ ಪ್ರಶ್ನೆ ಬಂದಾಗ ಒಂದು ಭಾಷೆ ಮಾತನಾಡುವ ಜನ ಇನ್ನೊಂದು ಭಾಷೆಯ ಮೇಲೂ ಪ್ರಭಾವ ಬೀರಿ ಈಗ ಡಚ್ - ಫ್ರೆಂಚ್ ಭಾಷೆಗಳು ಆಡಳಿತಾತ್ಮಕವಾಗಿ ಪ್ರಚಲಿತದಲ್ಲಿವೆ . ಇದು ಭಾಷಾರಾಜಕೀಯ. ಹೀಗೆ ಬೆಲ್ಸಿಯಂನಲ್ಲಿ ದ್ವಿಭಾಷೀಯ ಭಾಷಾರಾಜಕಾರಣ ನಡೆದಿದೆಯೆಂದು ಹೇಳಬಹುದು.

ಆಸ್ಟ್ರೇಲಿಯಾದಲ್ಲಿ ಒಂದು ಪ್ರಧಾನ ಭಾಷೆ 'ಆಸ್ಟ್ರೇಲಿಯನ್ ಇಂಗ್ಲೀಷ್ 'ಬಳಕೆ ಯಾಗುತ್ತಿದ್ದು , ಇದು ಆಡಳಿತ ಭಾಷೆಯೂ ಆಗಿದೆ. ದೇಶಕ್ಕೆ ಹೋಗುವ ವಲಸಿಗರು ಕಡ್ಡಾಯವಾಗಿ ಭಾಷೆಯಲ್ಲಿ ನಿರರ್ಗಳತೆಯನ್ನು ಹೊಂದಿರಲೇಬೇಕಾಗುತ್ತದೆ.

 ಕೆಲವು ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತ ಭಾಷೆಗಳನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸು ವುದು . ಕೆಲವು ರಾಷ್ಟ್ರಗಳಲ್ಲಿ ನಿರ್ಭಂಧಿಸುವುದೂ ಭಾಷಾ ರಾಜಕಾರಣ, ಉದಾಹರಣೆಗೆ: ಕರ್ನಾಟಕದಲ್ಲಿ ಕೊಂಕಣಿ ಅಲ್ಪಸಂಖ್ಯಾತ ಭಾಷೆಯಾಗಿದ್ದು ಅದನ್ನು ಶಿಕ್ಷಣದಲ್ಲಿ ಅಳವಡಿಸುವುದರ ಕುರಿತು ಸರಕಾರದ ಮಾನ್ಯತೆ ದೊರಕಿದೆ. ಆದರೆ ಕೊಂಕಣಿ ಜನ ಬಹುಸಂಖ್ಯಾತರಿಲ್ಲದ ಪಟ್ಟಣಪ್ರದೇಶದ ಶಾಲೆಗಳಲ್ಲಿ ಇದು ಅಳವಡಿಕೆಯಾಗಿಲ್ಲ. ಇದರ ಕುರಿತು ಸರಕಾರವೂ ಒತ್ತಡ ಹೇರಿಲ್ಲ. ಮಹಾರಾಷ್ಟ್ರದಲ್ಲಿ ಬಹುತೇಕ ಕನ್ನಡ ಶಾಲೆಗಳು ಮುಚ್ಚಲ್ಪಟ್ಟಿವೆ.

ಗೋವಾದಲ್ಲಿ ಕನ್ನಡ ಅಲ್ಪಸಂಖ್ಯಾತ ಭಾಷೆಯಾಗಿದೆ. ಇಲ್ಲಿನ ಕನ್ನಡ ಶಿಕ್ಷಣದ ರಾಜಕೀಯ ಬೆಕ್ಕಿನ ತಲೆಯ ಮೇಲಿನ ದೀಪದಂತಿದೆ. ಗೋವಾದ ಗಡಿಭಾಗದಲ್ಲಿ ಕನ್ನಡ ಶಿಕ್ಷಣಕ್ಕೆ ಪ್ರೋತ್ಸಾಹಿಸಿದ ಸರಕಾರ ಅಲ್ಲಿ ಪ್ರೌಢ ಶಿಕ್ಷಣದ ಕೊನೆಯ ಹಂತದ (S.S.L.C.) ಪರೀಕ್ಷೆಗೆ ಅವಕಾಶವನ್ನು ಗೋವಾದಲ್ಲಿ ನೀಡಿಲ್ಲ. ಗೋವಾ ಗಡಿಭಾಗದ ಮಕ್ಕಳು ಕಾರವಾರಕ್ಕೆ ಬಂದು ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ.

ಕರ್ನಾಟಕ ಸರಕಾರ ಗೋವಾದ ಕನ್ನಡ ಕಲಿತ ಮಕ್ಕಳಿಗೆ ರೀತಿ ಅವಕಾಶ ನೀಡಿರುವುದು ಕರ್ನಾಟಕ ರಾಜ್ಯದ ಭಾಷಾರಾಜಕೀಯ ನೀತಿಯಾಗಿದೆ . ಇಲ್ಲಿ ಗಮನಿಸತಕ್ಕ ಅಂಶವೆಂದರೆ ಕರ್ನಾಟಕದಲ್ಲಿ ಗಡಿಭಾಗದಲ್ಲಿ ಪರರಾಜ್ಯದ ಭಾಷೆ ಕಲಿತ ಮಕ್ಕಳಿಗೆ ಉದಾಹರಣೆಗೆ : ಕರ್ನಾಟಕದ ಮಂಗಳೂರು ಕಾಸರ್‌ಗೋಡಿನಲ್ಲಿ ಮಲಯಾಳಂ ಕರ್ನಾಟಕವು ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ತನ್ನ ರಾಜ್ಯದಲ್ಲಿಯೇ ಅವಕಾಶ ಕಲ್ಪಿಸಿದೆ. ಮಾಧ್ಯಮ ಹಾಗೂ ಪ್ರಥಮ ಭಾಷೆ ಅಥವಾ ತೃತೀಯ ಭಾಷೆಯಾಗಿ ಮಲಯಾಳಂ ಕಲಿತ ತೆಗೆದುಕೊಳ್ಳುವ ಅವಕಾಶವಿದೆ. ಇದು ಕೂಡ ಕರ್ನಾಟಕ ರಾಜ್ಯದ ಇನ್ನೊಂದು ರೀತಿಯ ಭಾಷಾರಾಜಕೀಯ ನೀತಿಯಾಗಿದೆ. ಇಂತಹ ಭಾಷಾರಾಜಕೀಯ ಕೇವಲ ರಾಜ್ಯ ಆಯ್ಕೆಗನುಗುಣವಾಗಿ ಪರೀಕ್ಷೆ ಮಟ್ಟದಲ್ಲಿ ಮಾತ್ರವಲ್ಲ ರಾಷ್ಟ್ರಮಟ್ಟಗಳಲ್ಲಿಯೂ ನಡೆಯುತ್ತದೆ.

ಭಾರತ ಸರ್ಕಾರವು ಜರ್ಮನ್ ಸರಕಾರದೊಂದಿಗೆ ಜರ್ಮನ್ ಭಾಷೆಯ ಶಿಕ್ಷಣವನ್ನು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) ಯ ಹಂತಗಳಲ್ಲಿ ಪರಿಚಯಿಸಿದೆ. ಈ ಒಡಂಬಡಿಕೆ ಭಾಷಾ ರಾಜಕೀಯದ್ದಾಗಿದೆ. ಹಾಗೆಯೆ ಜರ್ಮನ್ ಸರಕಾರವೂ ಕೂಡ ಸಂಸ್ಕೃತ ಹಾಗೂ ಹಿಂದಿಯನ್ನು ಜರ್ಮನ್ ದೇಶದ ಮಾಧ್ಯಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ಪರಿಚಯಿಸಲು ಒಪ್ಪಂದ ಮಾಡಿಕೊಂಡಿದೆ. ಇಂತಹ ಒಪ್ಪಂದಗಳು ರಾಷ್ಟ್ರ-ರಾಷ್ಟ್ರಗಳ ನಡುವೆ ಸಂಬಂಧ ವೃದ್ಧಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇದು ಭಾಷಾ ರಾಜಕಾರಣಕ್ಕೆ ಸಂಬಂಧಪಟ್ಟ ವಿಷಯವಾಗಿದೆ. ಹೀಗೆ ಭಾಷಾ ರಾಜಕಾರಣವು ಒಂದು ರಾಜ್ಯ-ರಾಷ್ಟ್ರ ಹಾಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಜನಸಾಮಾನ್ಯರು ಹಾಗೂ ಆಡಳಿತ ಪಕ್ಷ ಅಥವಾ ಸರಕಾರದ ನಡುವೆ ನಡೆಯುವ ಸೂಕ್ಷ್ಮ , ಸಂವೇದನಾತ್ಮಕ ವಿಷಯವಾಗಿದೆ .

Comments

Popular posts from this blog

ಭಾಷೆಯ ವಿವಿಧ ಘಟಕಾಂಶಗಳು

UDP Language syllabus in Kannada

ಭಾಷಾ ಅನನ್ಯತೆ ( Language Identity )