ಭಾಷೆಯ ಕಾರ್ಯಗಳು ( Functions of Language )
ಭಾಷೆಯ ಕಾರ್ಯಗಳು ( Functions of Language )
ಭಾಷೆ ತನ್ನದೇ ಆದ ವಿಶಿಷ್ಟ ವ್ಯವಸ್ಥೆಯನ್ನು ಹೊಂದಿದೆ . ಹೇಗಾದರೂ ಆಡುವುದೆಲ್ಲಾ ಭಾಷೆಯಾಗಲಾರದು . ಭಾಷೆ ವ್ಯಕ್ತಿಯ ವ್ಯಕ್ತಿತ್ವ ಅಳೆಯುವ ಸಾಧನವಾಗಿದೆ . ವ್ಯಕ್ತಿಯ ಮಾತಿನಿಂದ ಅವನ ಮನಸ್ಸು ಅಳೆಯಲಾಗುತ್ತದೆ . ಮಾತು ಎನ್ನುವುದು ಮನೋಭಾಷಿಕ ಪ್ರಕ್ರಿಯೆ . ಈ ಪ್ರಕ್ರಿಯೆಯೊಂದಿಗೆ ವ್ಯಕ್ತಿ ಸಾಮಾಜೀಕರಣ ಗೊಳ್ಳುವಲ್ಲಿ ಭಾಷೆಯೇ ಮಾಧ್ಯಮ . ಒಂದು ಸಮಾಜದ ಸಂಸ್ಕೃತಿಯನ್ನು ಭಾಷೆ ಅಳೆಯುತ್ತದೆ . ಇಂದಿನ - ಹಿಂದಿನ ಮಾಹಿತಿ ಸಂಗ್ರಹಣೆಗೂ ಭಾಷೆಯೇ ಸಾಧನ . ಭಾಷೆ ಪ್ರಮುಖವಾಗಿ ಸಂವಹನ ಮಾಧ್ಯಮ ಹೀಗೆ ಪಟ್ಟಿ ಮಾಡುತ್ತ ಹೋದರೆ ಭಾಷೆಯ ಕಾರ್ಯಗಳು ಒಂದೇ ಎರಡೇ ಮಾನವನ ಜೀವನದ ಅವಿಭಾಜ್ಯ ಅಂಗವಾದ ಭಾಷೆ ಅವನ ಜೀವನದಲ್ಲಿ ಅವನಿಗೆ ಅರಿವಿಲ್ಲದೇ ಅನೇಕ ಕಾರ್ಯಗಳನ್ನು ಮಾಡುತ್ತದೆ. ಭಾಷೆಯ ಕಾರ್ಯಗಳನ್ನು ಪ್ರಮುಖವಾಗಿ ಈ ಕೆಳಗಿನಂತೆ ಐದು ಪ್ರಕಾರಗಳಲ್ಲಿ ಪಂಗಡ ಮಾಡಬಹುದು .
ಆ ) ಸಂವಹನ ಮಾಧ್ಯಮವಾಗಿ ಭಾಷೆ
ಆ ) ಮಾಹಿತಿ ಸಂಗ್ರಹಣ ಸಾಧನವಾಗಿ ಭಾಷೆ
೧ ) ಸಾಮಾಜೀಕರಣ ಮತ್ತು ಸಾಂಸ್ಕೃತೀಕರಣದ ಸಾಧನವಾಗಿ ಭಾಷೆ ,
ಈ ) ವ್ಯಾವಹಾರಿಕ ಮತ್ತು ಆಡಳಿತ ಸಾಧನವಾಗಿ ಭಾಷೆ .
ಉ ) ಬೋಧನಾ ಮಾಧ್ಯಮವಾಗಿ ಭಾಷೆ .
ಇವುಗಳನ್ನು ಈಗ ಒಂದೊಂದಾಗಿ ವಿವರವಾಗಿ ವಿಶ್ಲೇಷಿಸೋಣ .
ಆ ) ಸಂವಹನ ಮಾಧ್ಯಮವಾಗಿ ಭಾಷೆ
ಶಿಕ್ಷಣಶಾಸ್ತ್ರದ ಪಾರಿಭಾಷಿಕ ನಿಘಂಟಿನ ಪ್ರಕಾರ ( ಡಾ.ಎನ್ . ಎಸ್ . ವೀರಪ್ಪ ) “ ಬರಹ ಅಥವಾ ಮಾತಿನ ಸಂಕೇತಗಳ ಮೂಲಕ ಭಾವನೆ , ಸುದ್ದಿ , ಮನೋಭಾವಾಥ ಗಳನ್ನು ತಿಳಿಸಲು ಅಥವಾ ಅರಿತುಕೊಳ್ಳಲು ಬಳಸುವ ಸಾಧನ ಅಥವಾ ಸಂಕೇತಗಳ ಪದ್ಧತಿಯೇ ಭಾಷೆ .
ಸ್ಟುರ್ಟವಾಂಟ್ ( Sturtevaut ) ರ ಪ್ರಕಾರ " Language is a systemofar bitrary vocal symbols by which members of the society act and react "
( ಒಂದು ಸಮಾಜದ ಸದಸ್ಯರು ಪರಸ್ಪರ ಸಂವಹನ ( ಕ್ರಿಯೆ - ಪ್ರತಿಕ್ರಿಯೆ ) ಬಳಸುವ ಧ್ವನಿ ಸಂಕೇತಗಳ ಒಂದು ವ್ಯವಸ್ಥೆಯೇ ಭಾಷೆ . ) ಈ ರೀತಿಯಲ್ಲಿ ಭಾಷೆ ಇದು ಪರಿಣಾಮಕಾರಿಯಾದ ಸಂವಹನ ಮಾಧ್ಯಮ ಎನ್ನುವ ಅಭಿಪ್ರಾಯ ಸೂಸುವ ಭಾಷಾ ತಜ್ಞರ ವ್ಯಾಖ್ಯೆಗಳನ್ನು ಕೊಡಬಹುದು . ಭಾಷೆಯು ಪ್ರಧಾನವಾಗಿ ಮನಸ್ಸಿನ ಭಾವನೆ , ಆಲೋಚನೆ , ಸ್ಥಿತಿ ಪ್ರಕಟಪಡಿಸುವ ಒಂದು ಶಾಬ್ಲಿಕ ಕ್ರಿಯೆಯಾಗಿದೆ . ಮನುಷ್ಯರು ಒಂದೆಡೆ ಸೇರಿ ಬದುಕುವಾಗ ಸಹಜವಾಗಿಯೇ ಸಾಮಾಜಿಕ , ಭಾವನಾತ್ಮಕ ಸಂರ್ಪಕಗಳು , ವಿಚಾರ ವಿನಿಮಯಗಳು ಏರ್ಪಡುತ್ತವೆ . ಈ ರೀತಿ ಸಂಪರ್ಕವಿದ್ದಾಗ ಪರಸ್ಪರ ಸಂವಹನವಾಗಿ ಒಂದು ಮಾಧ್ಯಮದ ಅವಶ್ಯಕತೆ ಇದ್ದೇ ಇರುತ್ತದೆ . ಇಲ್ಲದಿದ್ದಲ್ಲಿ ಭಾವನಾತ್ಮಕವಾಗಿ , ಸಾಮಾಜಿಕವಾಗಿ ಪರಸ್ಪರ ಬೆರೆಯಲು ಸಾಧ್ಯವಾಗುವುದಿಲ್ಲ . ಈ ಮಾಧ್ಯಮವೇ ಭಾಷೆ . ಮಾನವ ಪರಸ್ಪರ ವಿಚಾರ ವಿನಿಮಯಕ್ಕಾಗಿ ಪ್ರಾರಂಭದಲ್ಲಿ ಬರೀ ಶಬ್ದ , ಸಂಜ್ಞೆಗಳನ್ನು ಬಳಸಿ ಈ ಶಬ್ದಗಳೇ ಅರ್ಥಪೂರ್ಣವಾಗಿ ಮುಂದೆ ಇವು ಅರ್ಥಪೂರ್ಣ ವಾಕ್ಯಗಳಾಗಿ ಭಾಷೆ ಮೂಡಿ ಬಂದು ಈ ಭಾಷೆ ಪರಸ್ಪರ ಸಂವಹನದ ಅತ್ಯಂತ ಪ್ರಭಾವಶಾಲೀ ಮಾಧ್ಯಮವಾಗಿ ರೂಪುಗೊಂಡಿದೆ .
ಇಂದು ಮಾನವ ಈ ಸಂವಹನ ಮಾಧ್ಯಮದ ಮೂಲಕ ತನ್ನ ಅತಿ ಸೂಕ್ಷ್ಮ ಭಾವನೆ , ಆಲೋಚನೆಗಳನ್ನು ಯಥಾರ್ಥವಾಗಿ ಅಭಿವ್ಯಕ್ತಿಸಬಲ್ಲ , ಪರಸ್ಪರ ಸಮರ್ಥ ವಾಗಿ ಸಂವಹಿಸಬಲ್ಲ . ಇದರಿಂದ ಮಾನವ ಇಂದು ಜ್ಞಾನ ಮತ್ತು ಸಂಸ್ಕೃತಿಯನ್ನು ತನ್ನದಾಗಿಸಿಕೊಂಡು ಪ್ರಗತಿಪಥದತ್ತ ಸಾಗಿದ್ದಾನೆ .
ಭಾಷೆ ಇಲ್ಲದಿದ್ದಲ್ಲಿ ಭಾವನೆಗಳನ್ನು ವ್ಯವಸ್ಥಿತವಾಗಿ ರೂಪಿಸಿ ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ . ಭಾಷೆಯ ಮೂಲಕ ಭಾವನೆಗಳು ವ್ಯವಸ್ಥಿತವಾಗಿ ಹೊರ ಹೊಮ್ಮಿದಾಗ ಮಾತ್ರ ಪರಸ್ಪರ ಸೂಕ್ತ ಸಂವಹನ ಸಾಧ್ಯವಾಗುತ್ತದೆ . ಇಲ್ಲಿ ಭಾಷೆಯ ಭಾವನಾವಾಹಕವಾಗಿ ಕೆಲಸ ಮಾಡುತ್ತದೆ . ಭಾಷೆ ಮತ್ತು ಭಾವನೆಗೆ ಅವಿನಾಭಾವ ಸಂಬಂಧವಿದೆ . ಒಂದು ಬಿಟ್ಟು ಇನ್ನೊಂದು ಇರಲಾರವು . ಒಂದು ಬೆಳೆದರೆ ಮತ್ತೊಂದು ಬೆಳೆಯುತ್ತದೆ , ಇನ್ನೊಂದು ಅಳಿದರೆ ಮತ್ತೊಂದು ಅಳಿಯುತ್ತದೆ . ಭಾಷೆ ಭಾವನಾರೂಪಕವೂ ಹೌದು . ಮನುಷ್ಯನ ಅಂತರಂಗದ ಭಾವನೆಗಳನ್ನು ಆತನ ನೋವು ನಲಿವುಗಳ ತೀವ್ರತೆಯನ್ನು ಯಥಾರ್ಥವಾಗಿ ಭಾಷೆ ಸಂವಹಿಸಬಲ್ಲದು . ಆದರೆ ಇದು ವ್ಯಕ್ತಿಯ ಭಾಷಾ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ .
ಆ )ಮಾಹಿತಿ ಸಂಗ್ರಹಣ ಸಾಧನವಾಗಿ ಭಾಷೆ : ( Language as a means of Information Collection )
ಭಾಷೆ ಹೇಗೆ ಸಾಮಾಜೀಕರಣ ಮತ್ತು ಸಾಂಸ್ಕೃತೀಕರಣ ಹಾಗೂ ಸಂವಹನ ಮಾಧ್ಯಮವೋ ಹಾಗೆ ಮಾಹಿತಿ ಸಂಗ್ರಹಣ ಸಾಧನವೂ ಹೌದು .
ಮಾಹಿತಿ ಸಂಗ್ರಹಣವು ಸಾಮಾಜಿಕ ಮುನ್ನಡೆಯಲ್ಲಿ , ಸಾಂಸ್ಕೃತಿಕ ಬದಲಾ ವಣೆಯ ಪ್ರಗತಿಯಲ್ಲಿ , ಹೊಸಹೊಸ ಆವಿಷ್ಕಾರಗಳಲ್ಲಿ , ಹಿಂದಿನ ಇತಿಹಾಸ ತಿಳಿಯು ವಲ್ಲಿ , ಹಿಂದಿನ ಸಾಮಾಜಿಕ , ಸಾಂಸ್ಕೃತಿಕ ಮೌಲ್ಯಗಳನ್ನು ಅರಿಯುವಲ್ಲಿ ಹೇಗೆ ಸಮಾಜಕ್ಕೆ ಸಂಬಂಧಪಟ್ಟ ಎಲ್ಲ ವಿಷಯಗಳಲ್ಲೂ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ . ಈ ಮಾಹಿತಿ ಸಂಗ್ರಹಣೆಗೆ ಸಾಧನವೆಂದರೆ ಭಾಷೆ .
ಕ) ಸಾಮಾಜೀಕರಣ ಮತ್ತು ಸಾಂಸ್ಕೃತೀಕರಣದ ಸಾಧನವಾಗಿ ಭಾಷೆ : ( Language as a means of Socialization and Culturization )
ಸಾಮಾಜೀಕರಣದ ಸಾಧನವಾಗಿ ಭಾಷೆ (Language as a means of Socialization):
ಮಾನವನನ್ನು ಇತರ ಪ್ರಾಣಿಗಳಿಂದ ಬೇರ್ಪಡಿಸುವ,ಮಾನವನೇ ಸಂಪಾದಿಸಿ ಕೋಂಡ ಆಸ್ತಿ ಭಾಷೆ, ಮಾನವ ಸೃಷ್ಟಿಸಿದ ಎಲ್ಲ ಆವಿಷ್ಕಾರಗಳಲ್ಲಿ ಭಾಷೆಯೇ ಅತ್ಯಂತ ಪ್ರಮುಖವಾದ , ಅತ್ಯದ್ಭುತವಾದ ಆವಿಷ್ಕಾರವಾಗಿದೆ . ಭಾಷೆಯ ಆವಿಷ್ಕಾರವಾಗಿರದಿದ್ದರೆ ಉಳಿದ ಆವಿಷ್ಕಾರಗಳು ಆಗುತ್ತಲೂ ಇರಲಿಲ್ಲ . ಆದರೂ ಅವುಗಳಿಗೆ ಬೆಲೆಯೂ ಇರುತ್ತಿರಲಿಲ್ಲ.
ಭಾಷೆ ಎಷ್ಟು ಮಹತ್ವದ ಕ್ರಿಯೆಯಾಗಿದೆ ಎಂದು ನಾವು ಅದರ ಕುರಿತು ವಿಶ್ಲೇಷಿಸುವ ಗೋಜಿಗೆ ಹೋಗದಷ್ಟು ಅದು ಅತ್ಯಂತ ಸಹಜ ಕ್ರಿಯೆಯೆನಿಸಿದೆ . ಮಾತಿ ಲ್ಲದ ಜಗತ್ತು ಕಲ್ಪನೆಯಲ್ಲೂ ಭೀತಿ ಹುಟ್ಟಿಸುವಂತಹದ್ದು . ಭಾಷೆ ಮಾನವನ ಜೀವನದ ಒಂದು ಅವಿಭಾಜ್ಯ ಅಂಗವೇ ಆಗಿದೆ. ನಮ್ಮ ಅನಿಸಿಕೆಗಳನ್ನು, ಭಾವನೆಗಳನ್ನು ಭಾಷೆ ಯಲ್ಲಿ ವ್ಯಕ್ತಿಪಡಿಸುವಷ್ಟು ಸರಾಗವಾಗಿ ಮತ್ತು ಪರಿಪೂರ್ಣವಾಗಿ ಬೇರೆ ಯಾವ ಮಾಧ್ಯಮದಿಂದಲೂ ವ್ಯಕ್ತಪಡಿಸಲು ಸಾಧ್ಯವಿಲ್ಲ.
ಸಾಂಸ್ಕೃತೀಕರಣ ಸಾಧನವಾಗಿ ಭಾಷೆ : ( Language as a means of Cultarization )
ಸಾಮಾಜೀಕರಣದ ಸಾಧನವಾದ ಭಾಷೆಯು ಸಾಂಸ್ಕೃತೀಕರಣದ ಸಾಧನವೂ ಹೌದು , ಸಮಾಜ - ಸಂಸ್ಕೃತಿ ಇವೆರಡೂ ಒಂದು ನಾಣ್ಯದ ಎರಡು ಮುಖಗಳಿದ್ದಂತೆ . ಆಯಾ ಸಮಾಜದ ಸಂಸ್ಕೃತಿಯಿಂದಲೇ ಆ ಸಮಾಜವನ್ನು ಅಳೆಯಲಾಗುತ್ತದೆ . ನಾವು ಭಾಷೆಯ ಸ್ವರೂಪವನ್ನು ವಿಶ್ಲೇಷಿಸುವಾಗ ಹಿಂದಿನ ಘಟಕದಲ್ಲಿ ಭಾಷೆ ಹೇಗೆ ಸಂಸ್ಕೃತಿವಾಹಕ ಎಂಬುದನ್ನು ವಿಶ್ಲೇಷಿಸಿದ್ದೇವೆ .
ಒಂದು ಜನಾಂಗದ ಸಂಸ್ಕೃತಿಯಲ್ಲಿ ಅಲ್ಲಿನ ಜನ - ಜೀವನ , ಭಾಷೆ , ರೀತಿ - ನೀತಿ , ಆಚಾರ - ವಿಚಾರ , ನಡುವಳಿಗಳು , ಸಾಹಿತ್ಯ , ಶಿಕ್ಷಣ ಈ ಮುಂತಾದವುಗಳು ಮಹತ್ವದ ಪಾತ್ರ ವಹಿಸುತ್ತವೆ ಮತ್ತು ಇವುಗಳಲ್ಲಿಯೇ ಭಾಷೆ ಪ್ರಧಾನ ಪಾತ್ರ ವಹಿಸುತ್ತದೆ . ಯಾಕೆಂದರೆ ಭಾಷೆ ಇಲ್ಲದಿದ್ದರೆ ಉಳಿದ ಅಂಶಗಳು ಇರಲು ಸಾಧ್ಯವೆ ?
ಒಂದು ಸಂಸ್ಕೃತಿ ಬೆಳೆದು ವಿಕಾಸವಾಗುವಲ್ಲಿ ಭಾಷೆಯು ವಿಶೇಷ ಪಾತ್ರ ವಹಿಸು ತದೆ . ಒಂದು ಸಂಸ್ಕೃತಿಗೆ ಜೀವಕಳೆಗೆ ಭಾಷೆಯೇ ಮೂಲ , ಭಾಷೆಯ ಮೂಲಕ ಸಂಸ್ಕೃತಿ ಬೆಳೆಯುತ್ತದೆ , ಮತ್ತು ಸಂಸ್ಕೃತಿಯಲ್ಲಿಯೇ ಭಾಷೆ ವಿಕಾಸವಾಗುತ್ತ ಸಾಗುತ್ತದೆ . ಭಾಷೆಯು ಒಂದು ಸಂಸ್ಕೃತಿಯನ್ನು ಕಾಲದಿಂದ ಕಾಲಕ್ಕೆ , ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ , ಸಮಾಜದಿಂದ ಸಮಾಜಕ್ಕೆ ಪ್ರಸಾರ ಮಾಡುತ್ತ ಸಾಗುತ್ತದೆ . ಭಾಷೆ ಮತ್ತು ಸಂಸ್ಕೃತಿಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ ಇವೆರಡೂ ಪೂರಕ ಮತ್ತು ಪೋಷಕ .
ಡ) ವ್ಯಾವಹಾರಿಕ ಮತ್ತು ಆಡಳಿತ ಸಾಧನವಾಗಿ ಭಾಷೆ :
( Language as a means of Administration and Practical Affair )
ಭಾಷೆಯು ಅಭಿವ್ಯಕ್ತಿಯ ಸಾಧನವಾಗಿರುವಂತೆ ಸಮಾಜದ ಸಂಪರ್ಕ ಸಾಧನವೂ ಆಗಿದೆ . ಸಮಾಜದ ಸದಸ್ಯರ ಎಲ್ಲ ವ್ಯವಹಾರಗಳೂ ಭಾಷೆಯ ಮೂಲಕ ಜೀವಂತವಾಗಿ ಸಂವಹನಗೊಳ್ಳುತ್ತಿರುತ್ತವೆ . ಸಮಾಜಜೀವಿಯಾದ ಮಾನವನು ತನ್ನ ಇಂಗಿತವನ್ನು ಇತರರಿಗೆ ತಿಳಿಸಲು, ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು, ಸಮಾಜಜೀವಿಯಾಗಿ ವ್ಯವಹಾರ ಮಾಡಲು , ಅಭಿಪ್ರಾಯ ಪ್ರಕಟಿಸಲು ಭಾಷೆ ಅತ್ಯಂತ ಪರಿಣಾಮಕಾರಿಯಾದ ಸಮಾಜವ್ಯವಸ್ಥೆಯನ್ನೇ ಬದುಕಲು , ಸಾಮಾಜಿಕಸಂಸ್ಥೆಗಳ ಜೊತೆಯಲ್ಲಿ ಸಕ್ರಿಯವಾಗಿ ವ್ಯವಹರಿಸಲು,ದೈನಂದಿನ ಸಾಧನವಾಗಿದೆ . ಭಾಷೆ ಇಲ್ಲದೇ ಮಾನವ ಜೀವನದ ವ್ಯವಹಾರದ ಒಂದು ಕಡ್ಡಿಯ ಅಲುಗಾಡಲಾರದು . ಭಾಷೆಯು ವ್ಯಕ್ತಿ ಮತ್ತು ವ್ಯಕ್ತಿವ್ಯಕ್ತಿ ಮತ್ತು ಸಮಾಜ , ಸಮಾಜ ಮತ್ತು ಸಮಾಜ , ಸಮಾಜ ಮತ್ತು ರಾಷ್ಟ್ರ ಈ ರೀತಿ ಇಡೀ ಜಗತ್ತನ್ನು ಯಶಸ್ವಿಯಾಗಿ ಸಂಪರ್ಕಿಸಿ ವ್ಯವಹರಿಸುವ ಮಾಧ್ಯಮವಾಗಿದೆ .
ಇ) ಬೋಧನಾಮಾಧ್ಯಮವಾಗಿ ಭಾಷೆ ( Language as a Medium of Teaching ) :
ಬೋಧನೆ ಎನ್ನುವಂತಹುದು ಶಿಕ್ಷಣ ನೀಡುವ ಒಂದು ಮೂಲಭೂತ ಪ್ರಕ್ರಿಯೆ . ಬೋಧನೆಯಿಲ್ಲದೇ ಶಿಕ್ಷಣ ನೀಡಲು ಸಾಧ್ಯವಿಲ್ಲ . ಜ್ಞಾನಿಯಾದ ಗುರುವಿನಿಂದ ಶಿಷ್ಯ ಶಿಕ್ಷಣ ಪಡೆಯುವ ಪರಂಪರೆ ಭಾಷೆ ಹುಟ್ಟಿ ಅದಕ್ಕೊಂದು ರೂಪುರೇಷೆ ಬಂದಾಗಲೇ ಪ್ರಾರಂಭವಾಗಿರಬೇಕು . ಯಾಕೆಂದರೆ ಈ ಪರಂಪರೆ ಪ್ರಾಚೀನ ಕಾಲದಿಂದಲೂ ಇರುವುದನ್ನು ಕೇಳಿದ್ದೇವೆ.
ಹಿಂದೆ ಗುರುಕುಲ ಪದ್ಧತಿಯಲ್ಲಿ ಶಿಕ್ಷಣವು ಗುರುವಿನ ಭಾಷಾ ಪ್ರಭುತ್ವದ ಮೇಲೆಯೇ ಆಧರಿತವಾಗಿತ್ತು . ಯಾವುದೇ ರೀತಿಯ ಪಠ್ಯಪುಸ್ತಕಗಳಿರಲಿಲ್ಲ . ಗುರು ಶಿಷ್ಯನಿಗೆ ಭಾಷಾ ಮಾಧ್ಯಮದ ಮೂಲಕ ಜ್ಞಾನ ವರ್ಗಾಯಿಸಿ ಅದನ್ನು ಕಂಠಸ್ಥ ಮಾಡುತ್ತಿದ್ದ . ಒಂದು ಚಿಕ್ಕ ಭಾಷಾದೋಷವೂ ಸರಸ್ವತೀ ದ್ರೋಹವೆಂದು ಪರಿ ಗಣಿಸಲ್ಪಡುತ್ತಿತ್ತು . ಉಚ್ಚಾರ ಸ್ಪಷ್ಟತೆ , ಅಭಿವ್ಯಕ್ತಿಗೆ ತುಂಬಾ ಮಹತ್ವವಿತ್ತು . ಭಾಷೆಯನ್ನು ಸರಸ್ವತಿಯ ರೂಪ , ದೇವಿ , ಎಂದು ಭಾವಿಸಲಾಗಿತ್ತು . ಈಗಲೂ ಈ ಭಾವನೆ ಇದೆ .
Comments
Post a Comment