3. ಭಾಷಾ ರಾಜಕಾರಣ ( Language Politics )

3. ಭಾಷಾ ರಾಜಕಾರಣ ( Language Politics ) ಒಂದು ರಾಷ್ಟ್ರ ಅಥವಾ ರಾಜ್ಯದಲ್ಲಿ ಬಹುಭಾಷಾ ಸನ್ನಿವೇಶವಿದ್ದಾಗ 'ಭಾಷೆ ಎನ್ನುವುದು ಸರಕಾರಕ್ಕೆ ತೊಡಕಾಗಿ ಪರಿಣಮಿಸುತ್ತದೆ. ಜಗತ್ತಿನ ಬಹುತೇಕ ಗಳಲ್ಲಿ, ರಾಜ್ಯಗಳಲ್ಲಿ ಈ ಪರಿಸ್ಥಿತಿಯಿದೆ. ಜಗತ್ತಿನಲ್ಲಿಯೇ ಬಹುಭಾಷಿಕತೆಗೆ ಉತ್ತಮ ಉದಾಹರಣೆ ಭಾರತ. ಭಾರತದಲ್ಲಿ ಸುಮಾರು 1652 ವರ್ಗೀಕೃತ ಭಾಷೆಗಳು ಹಾಗೆ 184 ಆವರ್ಗೀಕೃತ ಭಾಷೆಗಳೂ ಇವೆಯೆಂದು 1961 ರ ಜನಗಣತಿ ಗುರುತಿಸಿದೆ. ಅಂದರೆ ಒಟ್ಟು 1836 ಭಾಷೆಗಳಿವೆ. ಅಲ್ಲದೇ ರಾಜ್ಯವಾರು ಮತ್ತೆ ಪ್ರತ್ಯೇಕವಾಗಿ ಬಹುಭಾಷಿಕಯಿರುವುದೂ ಭಾರತದ ಒಂದು ವೈಶಿಷ್ಟ್ಯ. ಇಂತಹ ಸಂದರ್ಭಗಳಲ್ಲಿ ಇದು ಪ್ರಾದೇಶಿಕ ವಾಗಿ ಸರಕಾರಗಳಿಗೆ ಬಹಳಷ್ಟು ಗೊಂದಲಮಯ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಮುಖ್ಯವಾಗಿ ಒಂದು ವಿಶಾಲವಾದ ಪ್ರದೇಶದಲ್ಲಿ ಒಂದು ಸರಕಾರವಿದ್ದಾಗ ಆ ಸರಕಾರವು ಆ ಪ್ರದೇಶದ ಬಹುಸಂಖ್ಯಾತರು ಮಾತನಾಡುವ ಒಂದು ಭಾಷೆಯನ್ನು ಆಡಳಿತಭಾಷೆಯಾಗಿ, ಪ್ರಾದೇಶಿಕ ಭಾಷೆಯಾಗಿ ಅಧಿಕೃತವಾಗಿ ಜಾರಿಗೆ ತರಬೇಕಾಗುತದೆ. ಈ ರೀತಿಯಲ್ಲಿ ಸರಕಾರ ಪ್ರಾದೇಶಿಕ ಭಾಷೆಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಭಾಷಾರಾಜಕಾರಣ ಅಥವಾ ಭಾಷಾ ರಾಜಕೀಯ ಎಂದು ಹೇಳಲಾಗುತ್ತದೆ. ಈ ಭಾಷಾ ರಾಜಕಾರಣವು ಭಾಷೆಗೆ ಸಂಬಂಧಪಟ್ಟಂತೆ ಸರಕಾರದ ಅನೇಕಾನೇಕ ನಿಲುವುಗಳನ್ನು ಒಳಗೊಂಡಿದೆ . ಭಾಷಾ ವಿಚಾರದಲ್ಲಿ ಆಡಳಿತ ಸರಕಾರ ಮತ್ತು ಜನರ ಎಲ್ಲ ರೀತಿಯ ವಿವಾದಗಳು (Issues), ಆಗುಹೋಗ...