Posts

3. ಭಾಷಾ ರಾಜಕಾರಣ ( Language Politics )

Image
    3. ಭಾಷಾ ರಾಜಕಾರಣ ( Language Politics ) ಒಂದು ರಾಷ್ಟ್ರ ಅಥವಾ ರಾಜ್ಯದಲ್ಲಿ ಬಹುಭಾಷಾ ಸನ್ನಿವೇಶವಿದ್ದಾಗ 'ಭಾಷೆ ಎನ್ನುವುದು ಸರಕಾರಕ್ಕೆ ತೊಡಕಾಗಿ ಪರಿಣಮಿಸುತ್ತದೆ. ಜಗತ್ತಿನ ಬಹುತೇಕ ಗಳಲ್ಲಿ, ರಾಜ್ಯಗಳಲ್ಲಿ ಈ ಪರಿಸ್ಥಿತಿಯಿದೆ. ಜಗತ್ತಿನಲ್ಲಿಯೇ ಬಹುಭಾಷಿಕತೆಗೆ ಉತ್ತಮ ಉದಾಹರಣೆ ಭಾರತ. ಭಾರತದಲ್ಲಿ ಸುಮಾರು 1652 ವರ್ಗೀಕೃತ ಭಾಷೆಗಳು ಹಾಗೆ 184 ಆವರ್ಗೀಕೃತ ಭಾಷೆಗಳೂ ಇವೆಯೆಂದು 1961 ರ ಜನಗಣತಿ ಗುರುತಿಸಿದೆ. ಅಂದರೆ ಒಟ್ಟು 1836 ಭಾಷೆಗಳಿವೆ. ಅಲ್ಲದೇ ರಾಜ್ಯವಾರು ಮತ್ತೆ ಪ್ರತ್ಯೇಕವಾಗಿ ಬಹುಭಾಷಿಕಯಿರುವುದೂ ಭಾರತದ ಒಂದು ವೈಶಿಷ್ಟ್ಯ. ಇಂತಹ ಸಂದರ್ಭಗಳಲ್ಲಿ ಇದು ಪ್ರಾದೇಶಿಕ ವಾಗಿ ಸರಕಾರಗಳಿಗೆ ಬಹಳಷ್ಟು ಗೊಂದಲಮಯ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಮುಖ್ಯವಾಗಿ ಒಂದು ವಿಶಾಲವಾದ ಪ್ರದೇಶದಲ್ಲಿ ಒಂದು ಸರಕಾರವಿದ್ದಾಗ ಆ ಸರಕಾರವು ಆ ಪ್ರದೇಶದ ಬಹುಸಂಖ್ಯಾತರು ಮಾತನಾಡುವ ಒಂದು ಭಾಷೆಯನ್ನು ಆಡಳಿತಭಾಷೆಯಾಗಿ, ಪ್ರಾದೇಶಿಕ ಭಾಷೆಯಾಗಿ ಅಧಿಕೃತವಾಗಿ ಜಾರಿಗೆ ತರಬೇಕಾಗುತದೆ. ಈ ರೀತಿಯಲ್ಲಿ ಸರಕಾರ ಪ್ರಾದೇಶಿಕ ಭಾಷೆಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಭಾಷಾರಾಜಕಾರಣ ಅಥವಾ ಭಾಷಾ ರಾಜಕೀಯ ಎಂದು ಹೇಳಲಾಗುತ್ತದೆ. ಈ ಭಾಷಾ ರಾಜಕಾರಣವು ಭಾಷೆಗೆ ಸಂಬಂಧಪಟ್ಟಂತೆ ಸರಕಾರದ ಅನೇಕಾನೇಕ ನಿಲುವುಗಳನ್ನು ಒಳಗೊಂಡಿದೆ . ಭಾಷಾ ವಿಚಾರದಲ್ಲಿ ಆಡಳಿತ ಸರಕಾರ ಮತ್ತು ಜನರ ಎಲ್ಲ ರೀತಿಯ ವಿವಾದಗಳು (Issues), ಆಗುಹೋಗ...

ಭಾಷಾ ಅನನ್ಯತೆ ( Language Identity )

  2. ಭಾಷಾಅನನ್ಯತೆ ( Language Identity ) ಭಾಷೆ ಎನ್ನುವುದು ವ್ಯಕ್ತಿಯ ಅನನ್ಯತೆಗಳಲ್ಲಿ ಒಂದು . ' ನ ಅನ್ಯತೆ ' = ' ಅನನ್ಯತೆ '-' ತಾನು ಅದರಿಂದ ಬೇರೆಯಲ್ಲ ಎಂಬ ಭಾವನೆ ' ಎಂಬರ್ಥ . ಭಾಷೆಯಿಂದಲೇ ತನ್ನನ್ನು ದಾಯಿಕವಾಗಿ , ಸಾಂಸ್ಕೃತಿಕವಾಗಿ , ಭಾವನಾತ್ಮಕವಾಗಿ , ಸಂವೇಗಾತ್ಮಕವಾಗಿ ತನ್ನಲ್ಲಿ ಸಾಮಾಜಿಕ ರೀತಿ - ನೀತಿ ಬಂಧಿಸಿಕೊಂಡಿರುತ್ತದೆ . ತನ್ನ ಭಾಷೆಯಲ್ಲಿರುವ ಸಾಂಸ್ಕೃತಿಕಸತ್ವವನ್ನು ತನ್ನಲ್ಲಿ ಅಳವಡಿಸಿಕೊಳ್ಳುವ ಶಕ್ತಿ ಭಾಷಾಅನನ್ಯತೆ . ಪ್ರತಿಯೊಂದು ಭಾಷೆಯು ತನ್ನದೇ ಆದ ನಿರ್ಬಂಧಗಳು ; ಸಾಂಸ್ಕೃತಿಕ ಮೌಲ್ಯಗಳು ; ಸಾಂಪ್ರದಾಯಿಕ ಆಚರಣೆಗಳು ; ರೂಢಿ ಆಚಾರ - ವಿಚಾರಗಳು ; ಜಾನಪದ ಕಲೆಗಳು , ಸಂಸ್ಕೃತಿಗಳ ಪದ್ಧತಿಗಳು ಮುಂತಾದವು ಗಳನ್ನು ಅಳವಡಿಸಿಕೊಂಡಿರುತ್ತದೆ . ಇವೆಲ್ಲವುಗಳು ಆಯಾ ಭಾಷೆಯ ಜನರಲ್ಲಿ ಭಾಷಾ ಬೆಳವಣಿಗೆಯ ಜೊತೆಜೊತೆಯಲ್ಲಿಯೇ ವ್ಯಕ್ತಿತ್ವದ ಜೊತೆ ಮೇಳವಿಸಿಕೊಳ್ಳುತ್ತ ಸಾಗುತ್ತಿರುತ್ತವೆ . ಇವು ಹಿರಿಯರಿಂದ ಮುಂದಿನ ಪೀಳಿಗೆಗೆ ವರ್ಗಾವಣೆಯಾಗುತ್ತ ಬಂದಿರುತ್ತವೆ . ಮುಂದೆ ವ್ಯಕ್ತಿ ಸಾಮಾಜಿಕ , ಸಾಂಸ್ಕೃತಿಕ ಸನ್ನಿವೇಶಗಳಲ್ಲಿ ತಾನು ಆ ಭಾಷಾ ಸಂಸ್ಕೃತಿಯವನು ಎಂಬುದಾಗಿ ಗುರುತಿಸಿಕೊಳ್ಳುತ್ತಾನೆ . ಉದಾಹರಣೆಗೆ : ಧಾರವಾಡ ಕನ್ನಡದವನು ಅಮೆರಿಕಾಕ್ಕೆ ಹೋಗಿ ಅಲ್ಲಿಯ ನಾಗರಿಕತೆ ಪಡೆದು ಅಲ್...